ಬೆಂಗಳೂರು –
ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ ಅದೊಂದು ನಮ್ಮ ಸಂಸ್ಕೃತಿಯಾಗಿದ್ದು ಅದೊಂದು ನಮ್ಮ ಸಂಸ್ಕ್ರತಿ ಯ ಪ್ರತೀಕವಾಗಿದ್ದು ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್ ಗೂ ಸಂಬಂಧವಿಲ್ಲ ಅದನ್ನು ಧರಿಸಿ ಬಂದವರನ್ನು ಶಾಲೆ, ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಳೆ, ಬಿಂದಿ,ಸಿಂಧೂರ, ಕುಂಕುಮ ಗಳು ಅಲಂಕಾರಿಕ ವಸ್ತುಗಳು,ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ, ಹಿಜಾಬ್ ಗೆ ಪ್ರತಿಯಾಗಿ ಬಳೆ, ಸಿಂಧೂರ,ಕುಂಕುಮವನ್ನು ಹೋಲಿಸುವುದು ಬೇಡ ಎಂದರು

ಇನ್ನೂ ಅದನ್ನು ಧರಿಸಿ ಬಂದವರನ್ನು ತಡೆದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದರು. ಇನ್ನೂ ಹಿಜಾಬ್ ಧರ್ಮವನ್ನು ಸೂಚಿಸಿದರೆ ಬಳೆ, ಕುಂಕುಮಬಿಂದಿ,ಸಿಂಧೂರ ಅಲಂಕಾರವನ್ನು ಸೂಚಿಸು ತ್ತದೆ.ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಬನ್ನಿ ಎಂದು ನಾವು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ.ಸ್ವ ಇಚ್ಛೆಯಿಂದ ಹಾಕಿಕೊಂಡು ಬರುತ್ತಾರೆ ಎಂದರು.ಇನ್ನೂ ನಿನ್ನೆ ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿಯೊಳಗೆ ಶಿಕ್ಷಕರು ಪ್ರವೇಶ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು.ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಆದೇಶ ನೀಡಿದ್ದಾರೆ.