ಬೆಂಗಳೂರು –
ಜುಲೈ 19 ರಂದು ಪರೀಕ್ಷೆ ಬರೆಯಲಿರುವ ಎಸ್ ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಜು.9 ಮತ್ತು ಜು.14 ರಂದು ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.ಆ ಎರಡು ದಿನವೂ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸ ಲಿದ್ದಾರೆ.

ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಜಿಲ್ಲಾ ಡಯಟ್ ಮತ್ತು ಡಿಡಿಪಿಐ ಕಚೇರಿಯಲ್ಲಿ ಸಚಿವ ರೊಂದಿಗೆ ಸಂವಾದ ನಡೆಸಬಹುದಾಗಿದೆ. ಬನ್ನಿ ವಿದ್ಯಾರ್ಥಿಗಳೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ ಎಂದು ಸಚಿವರು ಕರೆ ಕೊಟ್ಟಿದ್ದಾರೆ.ಹೀಗಾಗಿ ಈ ಒಂದು ವಿಡಿಯೋ ಕಾನ್ಪರನ್ಸ್ ಮಾಡಲಾಗುತ್ತಿದೆ

ಇನ್ನೂ ಪ್ರಮುಖವಾಗಿ ಶಿಕ್ಷಕರ ವರ್ಗಾವಣೆ ವಿಚಾರವು ಕೂಡಾ ಗಮನದಲ್ಲಿ ಇರಲಿ ಹಾಗೇ ಯಾವುದೇ ಒಬ್ಬ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊದಿಲ್ಲ ಎಂದು ಹೇಳಿದ್ದಿರಿ ಹಾಗೇ ನಡೆದುಕೊಳ್ಳಿ ಎಂಬ ಒತ್ತಾಯ ಶಿಕ್ಷಕ ರಿಂದ ಕೇಳಿ ಬರತಾ ಇದೆ