ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಭೀತಿ ಆತಂಕ ಹೆಚ್ಚಾಗುತ್ತಿದ್ದು ಇನ್ನೂ ಶಾಲಾ ಕಾಲೇಜುಗಳಲ್ಲೂ ಮಹಾ ಮಾರಿ ತನ್ನ ವ್ಯಾಪ್ತಿಯನ್ನು ಪಸರಿಸುತ್ತಿದ್ದು ಇದು ರಾಜ್ಯದಲ್ಲಿ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಬೆಂಗಳೂರಿ ನಲ್ಲಿ ಮಾತನಾಡಿದ ಅವರು ಒಮಿಕ್ರಾನ್ ವೈರಸ್ ಕಾಲಿಟ್ಟ ನಂತರ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಕೊರೋನಾ ಹೆಚ್ಚಾದ್ರೆ ಶಾಲೆ ಬಂದ್ ಮಾಡಲಾಗುವುದು ಎಂದರು
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು ರಾಜ್ಯದಲ್ಲಿನ ಕೊರೋನಾ ಸೋಂಕಿನ ತೀವ್ರತೆ ಬಗ್ಗೆ ತಜ್ಞರಿಂದ ಪ್ರತಿ ದಿನ ವರದಿಯನ್ನು ಪಡೆಯುತ್ತಿದ್ದೇವೆ. ಕೋವಿಡ್ ತೀವ್ರತೆಯನ್ನು ಆಧರಿಸಿ ಶಾಲಾ-ಕಾಲೇಜು ಮುಚ್ಚೋ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು
ಇನ್ನೂ ಸದ್ಯಕ್ಕೆ ತಜ್ಞರು ನೀಡುತ್ತಿರುವಂತ ವರದಿಯ ಪ್ರಕಾರ ಯಾರೂ ಆತಂಕ ಪಡಬಾರದು ಕೊರೋನಾ ತೀವ್ರತೆ ಇಲ್ಲ ಕೊರೋನಾ ತೀವ್ರತೆ ಆಧರಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಗಳು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ನಿರಂತರ ವಾಗಿ ಸಂಪರ್ಕದಲ್ಲಿದ್ದು ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾ ತೀವ್ರತೆ ಇಲ್ಲ ಎನ್ನುತ್ತಾ ಆತಂಕದಲ್ಲಿರುವ ಪೋಷಕರಿಗೆ ಆತ್ಮವಿಶ್ವಾಸದ ಮಾತು ಹೇಳಿದರು