ಬೆಂಗಳೂರು –
ಹೌದು ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಕರಣ ಮಾಡಲಾಗುತ್ತಿದೆಯಾ ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ಸರ್ಕಾರ ಏನು ಪ್ಲಾನ್ ಮಾಡಿದೆ ಗೊತ್ತಾ ಈ ಒಂದು ವಿಚಾರ ಕುರಿತು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ ಹೌದು ಕಾರ್ಪೋ ರೇಟ್ ಸಾಮಾಜಿಕ ಹೊಣೆಗಾರಿ ಕೆಯಡಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಕೊಡಲು ತರಬೇತಿ ನೀಡಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿವೆ ಯೇ ಹೊರತು ಇದು ಖಾಸಗಿಕರಣವಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಬಿಜೆಪಿಯವರು ತಲೆ ಕೆಟ್ಟು ಆರೋಪ ಮಾಡು ತ್ತಿದ್ದಾರೆ ನಾವು ನಮ್ಮ ಶಾಲೆಗಳನ್ನು ಖಾಸಗಿಯ ವರಿಗೆ ದತ್ತು ನೀಡುತ್ತಿಲ್ಲ ಇದನ್ನು ದತ್ತು ಯೋಜನೆ ಎಂದು ಹೇಳಿದ್ದು ಯಾರು? ವಿಷಯಗಳನ್ನು ಬೇರೆ ಹಾದಿಗೆ ಕೊಂಡೊಯ್ಯುವ ತಮ್ಮ ದುರ್ಬುದ್ದಿ ಯನ್ನು ಬಿಜೆಪಿಯವರು ಬಿಡಬೇಕು ಎಂದರು
ನಾನಾಗಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಾಗಲಿ ಶಾಲೆಗಳನ್ನು ಖಾಸಗಿಯವರಿಗೆ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಶಾಲೆಗಳನ್ನು ಕಟ್ಟಿಸಿ ಕೊಡುತ್ತೇವೆ ಎಂದು ಕೆಲ ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು ಇದನ್ನು ನಾವು ಬೇಡ ಎಂದು ಹೇಳಬೇಕೇ ಎಂದು ಅವರು ಪ್ರಶ್ನಿಸಿದರು.
ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಬಿ.ಸಿ. ನಾಗೇಶ್ ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಮಧು ಬಂಗಾರಪ್ಪ, ಮಾಜಿ ಶಿಕ್ಷಣ ಸಚಿವರು ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಬಿ. ಸಿ. ನಾಗೇಶ್ ಅವರ ಅವಧಿಯ ಕಾನೂನು ತೊಡಕಿ ನಿಂದಾಗಿಯೇ ಪ್ರಕರಣ ನ್ಯಾಯಾಲಯದ ಮುಂದೆ ಹೋಗಿದೆ.
ನ್ಯಾಯಾಲಯ ನೇಮಕಾತಿ ಆದೇಶ ಕೊಡಬೇಡಿ ಪ್ರಕ್ರಿಯೆ ನಡೆಸಿ ಎಂದುಹೇಳಿದ್ದು ಅದರಂತೆ ಕಾನೂನಿಗೆ ತಲೆ ಬಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ನಮಗೆ ನೇಮಕಾತಿ ಅವಕಾಶ ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಈ ವರ್ಷ 43 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..