ಬೆಂಗಳೂರು –
ಹತ್ತು ಹಲವಾರು ಗೊಂದಲ ಸಮಸ್ಯೆ ಮತ್ತೆ ವರ್ಗಾವಣೆಯ ಮತ್ತೊಂದು ಗೊಂದಲದ ನಡುವೆ ಇವತ್ತಿನಿಂದ ರಾಜ್ಯದಲ್ಲಿ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿವೆ. ಜು.1ರಿಂದ ಆರಂಭವಾಗಲಿದ್ದು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗಳು, ದೂರದರ್ಶನ ಚಂದನ ವಾಹಿತಿಯ ಸಂವೇದಾ ಇ-ಪಾಠ ಬೋಧನಾ ಕಾರ್ಯಕ್ರಮಗಳು ಶುರುವಾಗಲಿವೆ.

ಈಗಾಗಲೇ ಶಿಕ್ಷಣ ಇಲಾಖೆ ಪ್ರಕಟಿಸಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಜೂ.15ರಿಂದಲೇ ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗಿತ್ತು.ಜು.1ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಸಿದ್ಧತೆ ಮಾಡಿ ಕೊಳ್ಳಲು ಸೂಚಿಸಲಾಗಿತ್ತು.ಕೋವಿಡ್-19 ಸಾಂಕ್ರಾ ಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ 2021 22ನೇ ಸಾಲಿನ ಭೌತಿಕ ತರಗತಿಗಳು ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ, ದೂರದರ್ಶನ, ರೇಡಿಯೋ, ಯೂಟ್ಯೂಬ್ ಸೇರಿದಂತೆ ತಾಂತ್ರಿಕ ಸೌಲಭ್ಯಗಳ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸ ಲು ಸೂಚಿಸಿದೆ.

ಅದರಂತೆ ಖಾಸಗಿ ಶಾಲೆಗಳು ತಮ್ಮ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿ ಕೊಂಡಿವೆ.ಈಗಾಗಲೇ ವಿವಿಧ ಶಾಲೆಗಳು ಆನ್ ಲೈನ್ ತರಗತಿ ಆರಂಭಿಸಿವೆ. ಇನ್ನು ಕೆಲ ಶಾಲೆಗಳು ಜು.1ರಿಂದ ಆರಂಭಿಸಲಿವೆ.ಇನ್ನು ಶಿಕ್ಷಣ ಇಲಾಖೆ ಕೂಡ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳ ಅನುಕೂಲ ಕ್ಕಾಗಿ ಬುಧವಾರದಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವಾದ ಇ – ಪಾಠ ಬೋಧನಾ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ತಿಳಿಸಿದೆ. 1ರಿಂದ 7ನೇ ತರಗತಿಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತ್ತು 8ರಿಂದ 10ನೇ ತರಗತಿವರೆಗೆ ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ನಡೆಯಲಿವೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.ಒಟ್ಟಾರೆ ಏನೇ ಆಗಲಿ ಮಹಾಮಾರಿಯ ಆರ್ಭಟ ದ ನಡುವೆ ಹಲವಾರು ಸಮಸ್ಯೆ ಗೊಂದಲದ ಮಧ್ಯೆ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಸಂತೋಷದ ವಿಚಾರ