ಬೆಳ್ತಂಗಡಿ –
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶ ನಗೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸು ತ್ತಿರುವ ಧರ್ಮಾಧಿಕಾರಿಗಳನ್ನು ಸ್ವಾಗತಿಸಲು ಭರ್ಜರಿ ಸಿದ್ದತೆ ನಡೆದಿದೆ.ಹೌದು ಬೆಂಗಳೂರಿನ ಕಾರ್ಯಕ್ರಮದ ನಿಮಿತ್ತ ಪ್ರವಾಸದಲ್ಲಿದ್ದ ಹೆಗ್ಗಡೆ ಅವರು ಇಂದು ಆಗಮಿಸ ಲಿದ್ದು ಹೀಗಾಗಿ ಅವರನ್ನು ಬರಮಾಡಿಕೊಳ್ಳಲು ಕ್ಷೇತ್ರದಲ್ಲಿ ಉತ್ಸಾಹ ದಿಂದ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ತಯಾರಿ ಮಾಡಲಾಗಿದೆ
9ರಂದು ಸಂಜೆ ಕ್ಷೇತ್ರಕ್ಕೆ ಆಗಮಿಸುವ ಇವರನ್ನು ಸ್ವಾಗತಿ ಸಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅಭಿಮಾನಿ ಗಳು ಸಿದ್ಧತೆ ಕೈಗೊಂಡಿದ್ದಾರೆ.ಸಂಜೆ 5ಕ್ಕೆ ಸರಿಯಾಗಿ ಚಾರ್ಮಾಡಿಯಿಂದ ವಾಹನ ಜಾಥಾದ ಮೂಲಕ ಶ್ರೀ ಕ್ಷೇತ್ರದ ವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗು ವುದು.ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಮುಖ್ಯಮಂತ್ರಿಗಳು ಸಹಿತ ನಾಡಿನೆಲ್ಲೆಡೆಯಿಂದ ಗಣ್ಯಾತಿ ಗಣ್ಯರಿಂದ,ಭಕ್ತರಿಂದ,ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ ಹರಿದುಬಂದಿತ್ತು.ಇದೀಗ ಕ್ಷೇತ್ರದ ಜನತೆ ಶುಭ ಹಾರೈಸಲು ಕಾತರರಾಗಿದ್ದಾರೆ.ವಾಹನ ಜಾಥಾದಲ್ಲಿ ತಾಲೂಕಿನ ಅಭಿಮಾನಿ,ಭಕ್ತರೆಲ್ಲ ಭಾಗಿಯಾಗಬೇಕೆಂದು ಶಾಸಕರು ವಿನಂತಿಸಿದ್ದಾರೆ.ಧರ್ಮಾಧಿಕಾರಿಗಳಿಗೆ ದೇವರ ಸೇವೆಯೊಂದಿಗೆ ದೇಶಸೇವೆಗೈಯುವ ಶಾಸನಬದ್ಧ ಗೌರವ ಯುತ ಸ್ಥಾನಮಾನ ಪ್ರಾಪ್ತಿಯಾಗಿರುವ ಸಂತಸವನ್ನು ಗೌರವಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆ ಕುಟುಂಬ ವರ್ಗ ಸಿದ್ಧತೆ ನಡೆಸಿದೆ.ಇತ್ತ ಧಾರವಾಡದ ಎಸ್ ಡಿಎಮ್ ವೈದ್ಯಕೀಯ ಕಾಲೇಜಿನ ಡಾ ನಿರಂಜನಕುಮಾರ್ ಮತ್ತು ಪರಿವಾರ ಮತ್ತು ಜೆಎಸ್ ಎಸ್ ಶಿಕ್ಷಣ ಸಂಸ್ಥೆಯ ಡಾ ನ ವಜ್ರಕುಮಾರ್,ಡಾ ಅಜೀತ್ ಪ್ರಸಾದ್, ಸೂರಜ್ ಪ್ರಸಾದ್ ಮಹಾವೀರ ಉಪಾಧ್ಯಾಯ, ಜೀನಪ್ಪ ಕುಂದಗೋಳ, ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರಾಜ್ ಕಲ್ಲಾಪೂರ ಸಂತೋಷ,ಚನ್ನು ಬಾಳಗಿ,ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಗೋಪಿನಾಥ್ ಸೇರಿದಂತೆ ಶ್ರೀಮತಿ ಸಾಧನಾ,ಸೇರಿದಂತೆ ಹಲವರು ಧರ್ಮಾಧಿ ಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.