ಮೈಸೂರು –
ಒಂದು ಕಡೆ ಗ್ರಾಮ ಪಂಚಾಯತ ಚುನಾವಣೆ ಮತ ಏಣಿಕೆ ಕಾರ್ಯ ಜೋರಾಗಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಚುನಾವಣಾಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೌದು ಮತ ಏಣಿಕಾ ಕೇಂದ್ರದಲ್ಲಿಯೇ ಚುನಾವಣಾ ಕರ್ತವ್ಯದ ಮೇಲೆ ಬಂದಿದ್ದರು ಇವರು ಚುನಾವಣಾಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆ ಎಇಇ ಯಾಗಿದ್ದ ಬೋರೇಗೌಡ ಸಾವಿಗೀಡಾದ ಚುನಾವಣಾ ಅಧಿಕಾರಿಯಾಗಿದ್ದಾರೆ.

ಇಂದು ಮತ ಏಣಿಕೆ ಕಾರ್ಯದ ಹಿನ್ನಲೆಯಲ್ಲಿ ಕರ್ತವ್ಯದ ಮೇಲಿದ್ದು ಕಾರ್ಯ ನಿರ್ವಹಿಸುತ್ತಿದ್ದರು ಮತ ಎಣಿಕೆ ಕೇಂದ್ರದಲ್ಲೇ ಬೋರೇಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿರಿಯಾಪಟ್ಟಣದ ಪುಷ್ಪಾ ವಿದ್ಯಾಸಂಸ್ಥೆ ಯಲ್ಲಿ ನಡೆಯುತ್ತಿದ್ದ ಎಣಿಕೆ ಕಾರ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಮತ ಏಣಿಕಾ ಕೇಂದ್ರದಿಂದ ಮೈಸೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ನಿಧನರಾದರು. ಅಸ್ವಸ್ಥತೆಯಿಂದ ಕೆಲಕಾಲ ಮತ ಎಣಿಕೆ ಸ್ಥಗಿತವನ್ನು ಮಾಡಲಾಗಿತ್ತು. ನಂತರ ಮತ ಏಣಿಕೆಯನ್ನು ಮುಂದುವರೆಸಲಾಯಿತು.