ಬೆಂಗಳೂರು –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ವಿಚಾರ ಕುರಿತಂತೆ ಕೊನೆಗೂ ಹೈಕೋರ್ಟ್ ಸಿದ್ದತೆಗೆ ಸೂಚನೆ ನೀಡಿದೆ. ಮೊದಲು ಪಾಲಿಕೆಯ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿನ ಕ್ಷೇತ್ರಗಳಲ್ಲಿ 45 ದಿನಗಳಲ್ಲಿ ಪುನರ್ ವಿಂಗಡನೆ ಗೆ ಮಾಡಿಕೊಳ್ಳಿ. ನಂತರ 60 ದಿನಗಳಲ್ಲಿ ಕ್ಷೇತ್ರದ ಮೀಸಲಾತಿ ಮಾಡಿಕೊಳ್ಳಿ , ನಂತರ 60 ದಿನಗಳಲ್ಲಿ ಮತದಾರರ ಪಟ್ಟಿಯನ್ನು ಸಿದ್ದ ಮಾಡಿಕೊಳ್ಳಿ ಇದೇಲ್ಲ ಆದ ಬಳಿಕ ಚುನಾವಣೆ ಮಾಡಿ ಎಂದು ಬೆಂಗಳೂರಿನ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಸೂಚನೆಯನ್ನು ನೀಡಿದೆ.

ಇಂದು ವಿಚಾರಣೆ ಮಾಡಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಾಲಿಕೆಯ ಸದಸ್ಯರ ಅಧಿಕಾರವಧಿ ಮುಗಿದು ಒಂದು ವರುಷ ಕಳೆದರೂ ಈವರೆಗೆ ಚುನಾವಣೆ ನಡೆದಿಲ್ಲ. ಪಾಲಿಕೆಗೆ ಚುನಾವಣೆ ವಿಳಂಬ ಮಾಡುವ ಕುರಿತಂತೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ನ್ಯಾಯಾಲಯಕ್ಕೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ವಾದ ವಿವಾದವನ್ನು ಈವರೆಗೆ ಆಲಿಸಿದ ನ್ಯಾಯಾಲಯ ಇಂದು ಕೊನೆಗೂ ಚುನಾವಣಾ ಚಟುವಟಿಕೆ ಮಾಡುವ ಮುನ್ನ ಏನೇಲ್ಲಾ ಮಾಡಿಕೊಳ್ಳಬೇಕುಎಂಬ ಕುರಿತಂತೆ ಸೂಚನೆ ನೀಡಿ ಆದೇಶವನ್ನು ನೀಡಿದೆ.

ಇನ್ನೂ ಪಾಲಿಕೆಗೆ ಚುನಾವಣೆ ನಡೆಯಬೇಕು ಅಂದರೆ ಮತ್ತೇ ಒಂದು ವರುಷ ಕಾಯಲೆಬೇಕು . ಈಗಾಗಲೇ ಜನಪ್ರತಿನಿಧಿಗಳಿಲ್ಲದೇ ಅನಾಥವಾಗಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನೂ ಕಾಯಬೇಕು. ಹೈಕೋರ್ಟ್ ನಿಂದ ಇಂದು ಮಹತ್ವದ ತೀರ್ಪು ಪ್ರಕಟಗೊಂಡಿದ್ದು ಈಗಾಗಲೇ ಅವಧಿ ಮುಗಿದು ಕಳೆದಿದೆ. ಒಟ್ಟಾರೆ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಕೊನೆಗೂ ವಿಭಾಗೀಯ ಪೀಠ ಕೆಲ ಸಿದ್ದತೆಗಳನ್ನು ಮಾಡಿಕೊಂಡು ಚುನಾವಣಾಮಾಡಲುಸೂಚನೆನನೀಡಿದ್ದುಇನ್ನೂಇದರಿಂದ ಕೊನೆಗೂ ಪಾಲಿಕೆಗೆ ಇನ್ನಾದರೂ ಚುನಾವಣೆ ನಡೆಯಲಿದ್ದು ಚಟುವಟಿಕೆಗಳು ಗರಿಗೆದರಲಿವೆ.