ಬೆಳಗಾವಿ –
ಕಳೆದ ಎರಡು ಮೂರು ದಿನಗಳ ಹಿಂದೆ ಅಷ್ಟೇ ನಡೆದಿದ್ದ ರಾಜ್ಯ ಸಚಿವ ಸಂಪುಟದ ಸಭೆ ಇಂದು ಮತ್ತೆ ನಡೆಯಲಿದೆ.ಹೌದು ಸಧ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಹೀಗಾಗಿ ಇಂದು ಸುವರ್ಣ ಸೌಧ ದಲ್ಲಿ ಮುಖ್ಯಮಂತ್ರಿ ತುರ್ತಾಗಿ ಸಚಿವ ಸಂಪುಟದ ಸಭೆಯನ್ನು ಕರೆದಿ ದ್ದಾರೆ.
ನಗರದ ಹೊರವಲಯದಲ್ಲಿನ ಸುವರ್ಣಸೌಧ ದಲ್ಲಿ ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸೇರಿದಂತೆ ವಿವಿಧ ಸಮುದಾ ಯಗಳ ಮೀಸಲಾತಿ ಬೇಡಿಕೆಗಳ ಬಗ್ಗೆ ಈ ಒಂದು ಸಭೆಯಲ್ಲಿ ಚರ್ಚೆಯಾಗಲಿದ್ದು ಇದರೊಂದಿಗೆ ಇನ್ನೂ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಯೂ ಕೂಡಾ ಚರ್ಚೆಯಾಗಿ ತೀರ್ಮಾನವನ್ನು ಸಚಿವ ಸಂಪುಟದ ಸದಸ್ಯರು ತಗೆದುಕೊಳ್ಳಲಿ ದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಒಂದು ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿದ್ದ ಬರುವ ಚುನಾ ವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವೊಂ ದಿಷ್ಟು ನಿರ್ಧಾರಗಳನ್ನು ಸಚಿವ ಸಂಪುಟದ ಸದಸ್ಯರು ತಗೆದುಕೊಳ್ಳಲಿದ್ದು ಇನ್ನೂ ಬೆಳಗಾವಿ ಚಳಿಗಾಲದ ಅಧಿವೇಶನ ಇಂದೇ ಮುಕ್ತಾಯಗೊ ಳ್ಳುವ ಸಾಧ್ಯತೆ ಇದೆ
ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಧಿವೇಶನ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಡಿ.17 ರಿಂದ ಆರಂಭವಾಗಿರುವ ಅಧಿವೇಶನ ಡಿ.30 ರವರೆಗೆ ನಿಗದಿಯಾಗಿತ್ತು, ಆದರೆ ಒಂದು ದಿನ ಮೊದಲೇ ಅಂದರೆ ನಾಳೆ ಅಧಿವೇಶನ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಕೋವಿಡ್ ಸೋಂಕು ಉಲ್ಪಣ ಹಾಗೂ ಮಾರ್ಗಸೂಚಿ ಪಾಲನೆ ಹಿನ್ನೆಲೆ ಒಂದು ದಿನ ಮೊದಲೇ ಚಳಿಗಾ ಲದ ಅಧಿವೇಶನ ಸಮಾಫ್ತಿಗೊಳ್ಳಲಿದೆ ಎನ್ನಲಾಗಿದ್ದು ಸದನ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಏನೇನಾಗುತ್ತದೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..