ಬೆಂಗಳೂರು –
ಹೌದು ಕೇಂದ್ರ ಮಾದರಿಯ 7ನೇ ವೇತನ ಆಯೋಗ ನೀಡುವ ವಿಚಾರ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ಬಹುತೇಕವಾಗಿ ಅಂತಿಮ ಹಂತದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಸಮಿತಿಯನ್ನು ರಚನೆ ಮಾಡೊದು ಅಷ್ಟೇ ಬಾಕಿ ಇದ್ದಿದ್ದು ಅಕ್ಟೋಬರ್ ತಿಂಗಳ ಒಳಗಾಗಿ ಈ ಕುರಿತಂತೆ ಸಮಿತಿಯನ್ನು ರಚನೆ ಮಾಡೊದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರು ಕೂಡಾ ಹೇಳಿದ್ದರು
ಸಧ್ಯ ಅಕ್ಟೋಬರ್ ತಿಂಗಳು ಮುಗಿದಿದ್ದು ಹೀಗಾಗಿ ಇನ್ನೇನು ಎರಡು ಮೂರು ದಿನಗಳಲ್ಲಿ ಈ ಕುರಿ ತಂತೆ ರಾಜ್ಯ ಸರ್ಕಾರ ಸ್ಪಷ್ಟವಾದ ನಿರ್ಧಾರವನ್ನು ಪ್ರಕಟ ಮಾಡಲಿದ್ದು ಇದೇಲ್ಲದರ ನಡುವೆ ನಾಳೆ ತುರ್ತಾಗಿ ಸಚಿವ ಸಂಪುಟ ಸಭೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ದಾರೆ
ಪ್ರಮುಖವಾಗಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಹಾಗೇ ಸರ್ಕಾರಿ ನೌಕರರ ಈ ಒಂದು ಬೇಡಿಕೆ ಕುರಿತಂತೆ ಸ್ಪಷ್ಟವಾದ ತೀರ್ಮಾನವನ್ನು ಕೈಗೊಳ್ಳಲು ಈ ಒಂದು ಮಹತ್ವದ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು ಹೀಗಾಗಿ ನಾಳೆಯ ಈ ಒಂದು ಸಚಿವ ಸಂಪುಟದ ಸಭೆ ಯತ್ತ ಎಲ್ಲರ ಚಿತ್ತ ನೆಟ್ಟಿದ್ದ ಕನ್ನಡ ರಾಜ್ಯೋತ್ಸವ ಕೊಡುಗೆಯಾಗಿ ನಾಳೆಯಾದರೂ ಈ ಒಂದು ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗುತ್ತಾ ಈ ಒಂದು ಸುದ್ದಿಯ ನಿರೀಕ್ಷೆ ಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿದ್ದಾರೆ.