ಬೀದರ್ –
ಸರ್ಕಾರಿ ನೌಕರರ ಭವನದಲ್ಲಿ ಮಾರಾಮಾರಿ – ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕರರು ಹೌದು
ಸರ್ಕಾರಿ ನೌಕರರ ಚುನಾವಣೆಯ ಹಿನ್ನೆಲೆಯಲ್ಲಿ ನೌಕರರ ಭವನದಲ್ಲಿ ಮಾರಾಮಾರಿ ನಡೆದ ಘಟನೆ ಬೀದರ್ ನಲ್ಲಿ ನಡೆದಿದೆ. ನಾಮಪತ್ರ ಸಲ್ಲಿಕೆ ಬಳಿಕ ಆರಂಭವಾಗಿದೆ ಗಲಾಟೆ. ಪರಸ್ಪರ ಪ್ರತಿಸ್ಪರ್ದಿಗಳ ನಡುವೆ ಮಾತಿನ ಚಕಮಕಿ ಉಂಟಾಗಿ ನಂತರ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿ ನಡೆದಿದೆ.ನಿರ್ದೇಶಕ ಸ್ಥಾನದ ಅಭ್ಯರ್ಥಿ ಸೋಮಶೇಖರ ಬಿರಾದಾರ ಕಾರ್ ಚಾಲಕನ ಮೇಲೆ ಹಲ್ಲೆ ನಡೆದಿದ್ದು ಕಾರ್ ಚಾಲಕ ಕರಬಸಪ್ಪಾ ಧೂಳೆ ಮಾಸಿಮಾಡ (40) ಮೇಲೆ ಹಲ್ಲೆಯನ್ನು ಮಾಡಿದ್ದಾರಂತೆ.
ಗಾಯಾಳು ಕರಬಸಪ್ಪಾರನ್ನ ಸಧ್ಯ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿದೆ.ಬೀದರ್ ತಾಲೂಕಿನ ಸರ್ಕಾರಿ ನೌಕರರ ಚುನಾವಣೆ ನಿರ್ದೇಶಕ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. 66 ನಿರ್ದೇಶಕ ಸ್ಥಾನಗಳಿಗೆ ನಡೆಯುತ್ತಿರುವ ಸರ್ಕಾರಿ ನೌಕರರ ಚುನಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.ಪ್ರತಿಸ್ಪರ್ದಿ ಹಾಗೂ ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ ಬೆಂಬಲಿಗರಿಂದ ಈ ಒಂದು ಹಲ್ಲೆ ನಡೆದಿದೆ ಎಂದು ಸೋಮಶೇಖರ ಅವರು ಆರೋಪವನ್ನು ಮಾಡಿದ್ದಾರೆ.
ಪ್ರಬಲ ಎದುರಾಳಿ ಇರಬಾರದೆಂದು ಈ ರೀತಿ ವರ್ತನೆ ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದು ನಿರ್ದೇಶಕ ಸ್ಥಾನದ ಆಕಾಂಕ್ಷೆ ಸೋಮಶೇಖರ ಬಿರಾದಾರರಿಂದ ಆರೋಪ ಕೇಳಿ ಬಂದಿದ್ದು ಇದನ್ನೇಲ್ಲವನ್ನು ನೋಡಿದರೆ ರಾಜಕಾರಣಿಗಳ ಹಾಗೆ ಇವರು ಕೂಡಾ ಮಾಡಿದ್ದು ಕಂಡು ಬಂದಿದ್ದು ಈ ಒಂದು ವಿಚಾರ ಕುರಿತಂತೆ ಸಧ್ಯ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದು ಯಾರು ಕೂಡಾ ದೂರನ್ನು ನೀಡಿಲ್ಲ
ಒಟ್ಟಾರೆ ಮಾದರಿಯಾಗಬೇಕಾದ ಸರ್ಕಾರಿ ನೌಕರರು ಹೀಗೆ ಮಾಡಿದರೆ ಹೇಗೆ ಎಂಬ ಮಾತುಗಳು ರಾಜ್ಯದ ಸರ್ಕಾರಿ ನೌಕರರಿಂದ ಕೇಳಿ ಬರುತ್ತಿವೆ.
ಸುದ್ದಿ ಸಂತೆ ನ್ಯೂಸ್ ಬೀದರ್……