ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಚರ್ಚೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದ ಸಭೆ ವಿಫಲ ವಾಗಿದೆ.ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಯಲ್ಲಿ ಹಲವು ವಿಚಾರ ಗಳ ಕುರಿತು ಚರ್ಚೆ ಮಾಡಲಾಯಿತು.
ಪ್ರಮುಖವಾಗಿ 7 ನೇ ವೇತನ ಆಯೋಗ ಜಾರಿಗೆ ಅಷ್ಟೇ ಚರ್ಚೆ ಮಾಡುವಂತೆ ಮುಖ್ಯಮಂತ್ರಿ ಖಡಕ್ ಸೂಚನೆ ನೀಡುತ್ತಿದ್ದಂತೆ ಅಸಮಾಧಾನ ಗೊಂಡ ನೌಕರರ ಸಂಘದ ಮುಖಂಡರು ಮೊದಲ ಸಭೆಯನ್ನು ಎದ್ದು ಹೊರಗಡೆ ನಡೆದು ಬಂದರು
ಮತ್ತೆ ಎರಡನೇ ಹಂತದ ಸಭೆ ಕರೆದ ಮುಖ್ಯಮಂತ್ರಿ ಮತ್ತು ಸಚಿವರು ನಿಮ್ಮ ಬೇಡಿಕೆ ಗಳ ಕುರಿತು ಸರ್ಕಾರ ಬದ್ದವಾಗಿದ್ದು ಸಮಯ ವನ್ನು ನೀಡುವಂತೆ ವಿನಂತಿ ಮಾಡಿ ಪ್ರತಿಭಟನೆ ಮಾಡದಂತೆ ವಿನಂತಿ ಮಾಡಿದರು
ನಂತರ ಈ ಒಂದು ವಿಚಾರ ಕುರಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಭೆ ಮಾಡಿ ತಿಳಿಸೊದಾಗಿ ಷಡಾಕ್ಷರಿ ಅವರು ಹೇಳಿ ಸಭೆ ಮಾಡಲು ತೆರಳಿದರು
ಒಟ್ಟಾರೆ ಸಭೆ ಅರ್ಧ ಮರ್ಧವಾಗಿದ್ದು ನಾಳೆ ಪ್ರತಿಭಟನೆ ನಡೆಯುತ್ತದೆನಾ ಇಲ್ಲ ಎಂಬ ಕುರಿತು ಮಧ್ಯರಾತ್ರಿ ಉತ್ತರ ಸಿಗಲಿದ್ದು ನೌಕರರು ಗೊಂದಲ ದಲ್ಲಿ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..