ಬೆಂಗಳೂರು –
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ 15,000 ಹುದ್ದೆ ಗಳ ನೇಮಕಾತಿಗೆ ನಾಳೆಯಿಂದ ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ.435 ಸಿಇಟಿ ಪರೀಕ್ಷೆ ಕೇಂದ್ರಗಳಲ್ಲಿ 1,00683 ಅಭ್ಯರ್ಥಿಗಳು ಪರೀಕ್ಷೆ ಬರೆಯ ಲ್ಲಿದ್ದಾರೆ.ರಾಜ್ಯದ್ಯಾಂತ ಮಳೆ ಹಿನ್ನಲೆ ಎಲ್ಲ ಡಿಸಿಗಳಿಂದ ಪರೀಕ್ಷಾ ಕೇಂದ್ರಗಳ ಸುರಕ್ಷಿತೆಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ಪಡೆದುಕೊಂಡಿದೆ.ಎಲ್ಲಾ ಡಿಸಿಗಳ ಜೊತೆ ಸಿಇಟಿ ಎಕ್ಸಾಂ ಸುರಕ್ಷತೆ ಹಾಗೂ ಮಳೆ ಸಮಸ್ಯೆಗಳ ಬಗ್ಗೆ ಮತ್ತು ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ.ಇನ್ನೂ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತು ಒಯ್ಯುವಂ ತಿಲ್ಲ. ಮೊಬೈಲ್,ವಾಚ್,ಎಲೆಕ್ಟ್ರಾನಿಕ್ ಡಿವೈಸ್ ಗೆ ಅವಕಾ ಶವಿಲ್ಲ.ಪ್ರಶ್ನೆಪತ್ರಿಕೆ ಗೌಪ್ಯತೆ,ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.ಪ್ರತಿ ಕೇಂದ್ರದಲ್ಲಿ 20 ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಅವಕಾಶವಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲಾಗಿದೆ.ಯಾವುದೇ ಡ್ರೆಸ್ ಕೋಡ್ ನಿಗದಿ ಮಾಡಿಲ್ಲ.
ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಕೆಲವಡೆ ಮೆಟಲ್ ಡಿಟೆಕ್ಟರ್ ಅಳವಡಿಸಿಕೊಳ್ಳಲಾಗುತ್ತಿದೆ.ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನೆ ಅದೇ ಕೇಂದ್ರಕ್ಕೆ ಪರೀಕ್ಷಾ ಅಧಿಕಾರಿಗಳಾಗಿ ಬಳಸಿಕೊಳ್ಳೊದಿಲ್ಲ.ಪರೀಕ್ಷಾ ಕೇಂದ್ರದ ನೂರು ಮೀಟರ್ ಸುತ್ತಾ 144 ಸೆಕ್ಷನ್ ಇರಲಿದೆ.ಪರೀಕ್ಷೆ ಸೂಕ್ತ ಕ್ರಮಗಳ ಬಗ್ಗೆ ಗೃಹ ಇಲಾಖೆಯ ಜೊತೆ ಕೂಡ ಚರ್ಚೆ ಮಾಡಲಾಗಿದೆ.