ರಾಯಚೂರು –
ಹಾಡುಹಗಲೇ ಬೈಕ್ ಮೇಲೆ ಬಂದ ಖದೀಮರು ಮಹಿಳೆಯ ಕೈಯಲ್ಲಿದ್ದ ಹಣದ ಚೀಲವನ್ನು ಕಸಿದುಕೊಂಡು ಹೋಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಪ್ಲಾಟ್ ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್ ಗೆ ತುಂಬಿ ಉಳಿದ ಹಣದಲ್ಲಿ ದೀಪಾವಳಿಗೆ ಏನಾದರೂ ತೆಗೆದುಕೊಂಡು ಬಂದರಾಯಿತು ಎಂದುಕೊಂಡು ಮಹಿಳೆಯ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಹಬ್ಬಕ್ಕೆ ಏನಾದರೂ ತೆಗೆದುಕೊಂಡು ಬಂದರಾಯಿತು ಎಂದುಕೊಂಡ ಮಹಿಳೆ ನಡೆದುಕೊಂಡು ಮಾರುಕಟ್ಟೆಗೆ ಹೋರಟಿದ್ದಾರೆ.ರಸ್ತೆಯ ಪಕ್ಕದಲ್ಲಿ ಹೊರಟಿದ್ದ ಮಹಿಳೆಯ ಕೈಯಲ್ಲಿನ ಹಣದ ಬ್ಯಾಗನ್ಮು ಕದ್ದು ಹೊಯ್ದಿದ್ದಾರೆ. ಘಟನೆ ರಾಯಚೂರು ನಗರದ ಬಸವನಭಾವಿ ಚೌಕ್ ಹತ್ತಿರ ಬರುವ ರಿಯಾಲನ್ಸ್ ಮಾರ್ಟ್ ಬಳಿ ಬ್ಯಾಂಕ್ ನಿಂದ ತೆರಳುವ ವೇಳೆ ಬೈಕ್ ಮೇಲೆ ದುಷ್ಕರ್ಮಿಗಳು ಮಹಿಳೆಯ ಕೈಯಲ್ಲಿದ್ದ ಚೀಲವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ನಗರದ ಪೋತಗಲ್ ರಸ್ತೆಯಲ್ಲಿ ಬರುವ ಸಂಗಯ್ಯನ ಕಾಲುವೆ ಬಳಿ ಹೇಮಾವತಿ ಎನ್ನುವ ಮಹಿಳೆಯ ಹಣವನ್ನ ಖದೀಮರು ದೋಚಿಕೊಂಡು ಪರಾರಿಯಾಗಿದ್ದಾರೆ. ಹೇಮಾವತಿ ಪ್ಲಾಟ್ ಕೊಂಡುಕೊಳ್ಳಲು ಇಂಡಿಯನ್ ಬ್ಯಾಂಕ್ ನಲ್ಲಿ ಹಣವನ್ನ ಜಮಾ ಮಾಡಿದ ಮಹಿಳೆ, ಬ್ಯಾಂಕ್ ನಿಂದ ಹಣವನ್ನ ತೆಗೆದುಕೊಂಡು ಮನೆಗೆ ತೆರಳುತ್ತಿದ್ದಳು. ಇದನ್ನ ಗಮನಿಸಿದ ಖದೀಮರು ಬ್ಯಾಂಕ್ ನಿಂದ ಮನೆ ತೆರಳುವಾಗ ಮಾರ್ಗ ಮಧ್ಯ ರಿಯಾಲನ್ಸ್ ಮಾರ್ಟ್ ಮುಂಭಾಗದಲ್ಲಿ ಕೈಯಲ್ಲಿದ್ದ ಬೈಕ್ ನಲ್ಲಿ ಇಬ್ಬರು ಖದೀಮರು ಚೀಲವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಜೋರಾಗಿ ಮಹಿಳೆಯ ಕೈಯಲ್ಲಿನ ಬ್ಯಾಗ್ ನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದು
ಈ ವೇಳೆ ಕೆಳಗಡೆ ಬಿದಿದ್ದು ಸಣ್ಣ ಪುಟ್ಟ ಗಾಯಗಳು ಆಗಿವೆ. ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಡುಹಗಲೇ ಜನ ಬೀಡ ಪ್ರದೇಶದಲ್ಲಿ ಖದೀಮರು ಈ ಕೃತ್ಯ ನಗರದ ಜನತೆಯನ್ನ ಬೆಚ್ಚಿ ಬಿಳಿಸಿದ್ದು, ಇಂತಹ ಖದೀಮರನ್ನ ಪೊಲೀಸ್ ಸೆರೆ ಹಿಡಿಯಬೇಕೆಂದು ಜನರು ಒತ್ತಾಯಿಸಿದ್ದಾರೆ. ಖದೀಮರು ಈ ದೃಶ್ಯ ಸಿಸಿ ಟಿವಿ ಕ್ಯಾಮರ್ ದಲ್ಲಿ ಸೆರೆಯಾಗಿದೆ.