ಬೆಂಗಳೂರು –
ರಾಜ್ಯದಲ್ಲಿ ನಮ್ಮದು ತೀರಾ ಹಿಂದೂಳಿದ ಸಮಾಜವಾಗಿದ್ದು ಎಲ್ಲರ ಹಾಗೇ ನಮಗೊಂದು ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿ. ಹಿಗೇಂದು ಅಖಿಲ ಕರ್ನಾಟಕ ಡೋಹರ ಕಕ್ಕಯ್ಯಾ ಸಮಾಜ ಸಂಘಟನೆ ಒತ್ತಾಯ ಮಾಡಿದೆ. ಅಖಿಲ ಕರ್ನಾಟಕ ಡೋಹರ ಕಕ್ಕಯ್ಯಾ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಸಂತೋಷ ಸವಣೂರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಒತ್ತಾಯ ಮಾಡಿದರು.

ಮಹಾಪ್ರಸಾಧಿ ಶಿವಶರಣ ಢೋಹರ ಕಕ್ಕಯ್ಯಾ ಹೆಸರಿನಲ್ಲಿ ನಮ್ಮ ಸಮಾಜಕ್ಕೇ ಒಂದು ನಿಗಮ ಮಂಡಳಿ ಸ್ಥಾಪನೆ ಮಾಡಬೇಕೆಂದು ಮತ್ತೊಮ್ಮೆ ಒತ್ತಾಯವನ್ನು ಮಾಡಿದರು. ಈ ಹಿಂದೆ ಭೇಟಿಯಾಗಿ ಮನವಿ ನೀಡಿದ್ದ ನಿಯೋಗ ಇಂದು ಮತ್ತೇ ನಾಡದೋರೆಯನ್ನು ಭೇಟಿ ಮಾಡಿ ಕೂಡಲೇ ನಿಮಗ ಮಂಡಳಿ ಸ್ಥಾಪನೆ ಮಾಡುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ರಿಗೂ ಆಗ್ರಹಿಸಿದ್ರು.

ಅಲ್ಲದೇ ಈ ಒಂದು ನಿಗಮ ಮಂಡಳಿ ರಚನೆಗೆ ದಿನಾಂಕವನ್ನು ನಿಗದಿ ಮಾಡುವಂತೆ ಸಂತೋಷ ಸವಣೂರು ನೇತ್ರತ್ವದ ನಿಯೋಗ ಮುಖ್ಯಮಂತ್ರಿಗೆ ಒತ್ತಾಯವನ್ನು ಮಾಡಿದರು.ಸಮಾಜಕ್ಕೇ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ ಅಲ್ಲದೇ ನಿಗಮ ಮಂಡಳಿಯಲ್ಲೂ ಸೂಕ್ತ ಸ್ಥಾನಮಾನವೂ ದೊರೆತಿಲ್ಲ ಹೀಗಾಗಿ ಕೂಡಲೇ ಎಲ್ಲರ ಹಾಗೇ ನಮಗೂ ಅವಕಾಶವನ್ನು ಕೊಡಿ ಎಂದು ಒತ್ತಾಯಿಸಿದ್ರು.

ಇನ್ನೂ ಬೆಂಗಳೂರಿನಲ್ಲಿ ನಮ್ಮ ಸಮಾಜಕ್ಕೇ ಒಂದು ಭವನಕ್ಕೇ ಜಾಗ ನೀಡಿ ಬಡ ಸಮಾಜದವರು ಬೆಂಗಳೂರಿಗೆ ಬಂದರೆ ಇದರಿಂದ ಅನುಕೂಲವಾಗುತ್ತದೆ ಎಂಬ ಬೇಡಿಕೆಯನ್ನು ಸಿಎಮ್ ಮುಂದೆ ಇಟ್ಟರು. ಬೆಂಗಳೂರಿನ ವಿಧಾನ ಸೌಧಕ್ಕೆ ಬೆಟ್ಟಿ ಕೊಟ್ಟು ನಿಗಮ ಮಂಡಳಿಯ ಕುರಿತು ಮಾನ್ಯ ಮುಖ್ಯಮಂತ್ರಿಗಳ ಜೋತೆ ಚರ್ಚೆ ಮಾಡಲು ದಿನಾಂಕ ಮತ್ತು ಸಮಯ ನಿಗದಿ ಪಡಿಸಲು ಒತ್ತಾಯವನ್ನು ಮಾಡಿದ್ರು.

ಇದೇ ವೇಳೆ ನೂತನವಾಗಿ ಲೀಡಕರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಪ್ರೋ ಎಮ್ ಲಿಂಗಣ್ಣಾ , ಅಂಬೇಡ್ಕರ್ ನಿಮಗ ಮಂಡಳಿ ಅಧ್ಯಕ್ಷರಾದ ಸಿ ಮುನಿಕೃಷ್ಣ ಹಾಗೇ ಸಫಾಯಿ ಕರ್ಮಚಾರಿ ಅಧ್ಯಕ್ಷರಾದ ಎಮ್ ಶಿವಣ್ಣಾ
ಇವರಿಗೆ ಅಖಿಲ ಕರ್ನಾಟಕ ಡೋಹರ ಕಕ್ಕಯ್ಯಾ ಸಮಾಜ ಸಂಘಟನೆಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇನ್ನೂ ಈ ಒಂದು ನಿಯೋಗದಲ್ಲಿ ರಾಜ್ಯಾಧ್ಯಕ್ಷ ಸಂತೋಷ ಸವಣೂರು,ಉಪಾಧ್ಯಕ್ಷರಾದ ನಾಗೇಶರಾವ್ ವಟಕರ್,ಸತೀಶ್ ಚಕ್ರವರ್ತಿ, ಶ್ರೀನಿವಾಸ್ ಶಿಂಧೆ,ನರೇಶ್ ಕಾಟಗೇ,ಬಸವರಾಜ ಜಗದಾಳೆ ಗುರು ಪೋಳ್,ಎಮ್ ಎನ್ ಖಜರೆ,ಜ್ಞಾನೇಶ್ವರ ಗಜಾಕೋಶ ,ಬಾಬುರಾವ್ ಘೋಡಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.