ಅಮಾನತುಗೊಂಡು ನಾಲ್ಕು ತಿಂಗಳಾದರೂ ಆ ಮುಖ್ಯ ಶಿಕ್ಷಕಿ ಯವರಿಗೆ ಬಂದಿದೆ ಕೈತುಂಬಾ ಸಂಬಳ – ಶಿಕ್ಷಣ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಹೇಗಿದೆ ನೋಡಿ…..

Suddi Sante Desk

ವಿಜಯಪುರ –

ಹೌದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದರೂ ಕೂಡಾ ಶಿಕ್ಷಕರಿಗೆ ಕೈತುಂಬಾ ಸಂಬಳ ನೀಡಿದ ಬೆನ್ನಲ್ಲೇ ಮತ್ತೆ ಇಂಥಹದೊಂದು ಪ್ರಕರಣವೊಂದು ಎರಡು ದಿನ ಗಳ ಹಿಂದೆಯಷ್ಟೇ ಬೆಳಕಿಗೆ ಬಂದಿತ್ತು. ಇದರೊಂದಿಗೆ ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬಟಾ ಬಯಲಾಗಿದೆ.

ಹೌದು ಇಲ್ಲಿ ಕರ್ತವ್ಯಕ್ಕೆ ಗೈರಾದರೂ ಅಮಾನತ್ತಾ ದರೂ,ನಿವೃತ್ತಿಯಾದರೂ ಬರುತ್ತೆ ಕೈ ತುಂಬಾ ಸಂಪೂರ್ಣ ಸಂಬಳ ಬರುತ್ತದೆ ಎಂಬ ಮಾತಿಗೆ ಮತ್ತೊಂದು ಸಾಕ್ಷಿ ಸಮೇತವಾಗಿ ಇಲಾಖೆಯಲ್ಲಿ ಪ್ರಕರಣವೊಂದು ಸಿಕ್ಕಿದೆ.ಈ ಮೂಲಕ ವಿಜಯ ಪುರ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬಟಾ ಬಯಲಾಗಿದೆ.

ಪ್ರಕರಣವೊಂದರಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯೊ ಬ್ಬರು ಅಮಾನತು ಗೊಂಡು ನಾಲ್ಕು ತಿಂಗಳಾಗಿ ದ್ದರೂ ಕಾಡಾ ಕೈ ತುಂಬಾ ಸಂಬಳ ಬರುತ್ತಿದ್ದು ಸಂಬಳವನ್ನು ಪಡೆಯುತ್ತಿದ್ದಾರೆ ಈ ಮುಖ್ಯ ಶಿಕ್ಷಕಿ ಯೊಬ್ಬರು.ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಗ್ನಿಯವರೇ ಈಗ ಸಂಬಳ ವನ್ನು ತಗೆದುಕೊಳ್ಳುತ್ತಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕರ ಆವಾಂತರ ಬೆಳಕಿಗ ಬಂದಿದೆ.ಅಮಾನತುಗೊಂಡು ನಾಲ್ಕು ತಿಂಗಳಾ ದರೂ ಕೂಡಾ ಪೂರ್ಣ ಪ್ರಮಾಣದಲ್ಲಿ ಸಂಬಳ ವನ್ನು ಪಡೆದಿದ್ದಾರೆ ಇವರು.ಯಾರಾದರೂ ಶಿಕ್ಷಕರು ತಪ್ಪು ಮಾಡಿದರೆ ಅವರ ಮೇಲೆ ವರದಿಯನ್ನು ಕಳಿಸುವ ಅಧಿಕಾರಿಗಳಿಗೆ ಶಿಕ್ಷಕಿ ಯವರು ಅಮಾನ ತುಗೊಂಡಿದ್ದು ಗೊತ್ತಾಗಲಿಲ್ಲ ಎಂಬ ವಿಚಾರ ಈಗ ಮೇಲಾಧಿಕಾರಿಗಳಿಗೆ ಕಾಡುತ್ತಿದ್ದು ಇದರ ಹಿಂದೆ ಯಾರು ಇದ್ದಾರೆ ಸೇವೆಯಿಂದ ಅಮಾನತುಗೊಂಡಿ ದ್ದರು ಕೂಡಾ ಹೇಗೆ ಇವರ ಸಂಬಳವನ್ನು ಮಾಡಿದ್ದು

ಸಂಬಳ ಮಾಡಿದ್ದು ಯಾರು ಈ ಎಲ್ಲಾ ವಿಚಾರ ಕುರಿತಂತೆ ಸಧ್ಯ ದಾಖಲೆ ಸಮೇತವಾಗಿ ವರದಿ ಯನ್ನು ಸುದ್ದಿ ಸಂತೆ ಪ್ರಸಾರವನ್ನು ಮಾಡಿದ್ದು ಇನ್ನೂ ಇದೇ ರೀತಿಯಲ್ಲಿ ಇನ್ನೂ ಕೆಲವು ಅವಘಡಗಳಿದ್ದು ಅವುಗಳನ್ನು ದಾಖಲೆಗಳನ್ನು ಸುದ್ದಿ ಸಂತೆ ಟೀಮ್ ಕಲೆ ಹಾಕುತ್ತಿದ್ದು ಬಟಾ ಬಯಲು ಮಾಡಲಿದೆ ಇದರ ಹಿಂದೆ ಹಲವು ಅನುಮಾನಗಳು ಹುಟ್ಟುಕೊಂಡಿದ್ದು ಇದಕ್ಕೆಲ್ಲ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.