ಧಾರವಾಡ –
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ರಾಜ್ಯದಲ್ಲಿ ಸರ್ಕಾರಿ ನೌಕರರು ಕೂಡಾ ಆಚರಣೆ ಮಾಡಿದರು ಹೌದು ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರು ಈ ಒಂದು ಯೋಗ ದಿನವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.
ಧಾರವಾಡ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ದಲ್ಲಿ ಯೋಗ ನಮ್ಮ ಸಂಸ್ಕೃತಿ.ಯೋಗವನ್ನು ನಮ್ಮ ದಿನಚ ರಿಯ ಒಂದು ಭಾಗವಾಗಿ ಸ್ವೀಕರಿಸಿ ಪಾಲಿಸಬೇಕು ಇದ ರಿಂದ ರೋಗರುಜಿನ ಮುಕ್ತ,ಆರೋಗ್ಯಯುಕ್ತ ಜೀವನ ಪಡೆಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಬಿ.ಮನ್ನಿಕೇರಿ ಅವರು ಹೇಳಿದರು.ನಗರದಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಸಭಾವನದಲ್ಲಿ 8 ನೇ ವಿಶ್ವ ಯೋಗ ದಿನಾಚರಣೆ ಅಂಗ ವಾಗಿ ಆಯೋಜಿಸಿರುವ ವಿಶೇಷ ಯೋಗ ಶಿಬಿರ ಉದ್ಘಾ ಟಿಸಿ ಮಾತನಾಡಿದರು.
ಯೋಗ ಮಾಡುವದರಿಂದ ರೋಗ ಮುಕ್ತ ಜೀವನ ಪಡೆಯಬಹುದು.ಯೋಗ ಅಭ್ಯಾಸವನ್ನು ರೂಡಿಯಾಗಿ ಬೆಳೆಸಿಕೊಳ್ಳಬೇಕು.ಇಡೀ ವಿಶ್ವ ಇಂದು ಯೋಗದತ್ತ ಹೊರಳುತ್ತಿದೆ.ಪ್ರಾಚೀನ ಕಾಲದಿಂದಲೂ ಯೋಗವು ಭಾರತೀಯ ಪರಂಪರೆಯ ಒಂದು ಭಾಗವಾಗಿ ಬೆಳೆದು ಬಂದಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ ನೌಕರರಿಗೆ ಕರ್ತವ್ಯದಷ್ಟು ಆರೋಗ್ಯವು ಬೇಕು ಪ್ರತಿದಿನ ಒತ್ತಡ,ನಿರಂತರದ ಕೆಲಸದಿಂದ ಆಯಾಸವಾ ಗುತ್ತದೆ. ಪ್ರತಿದಿನ ಯೋಗ ಮಾಡುವದರಿಂದ ಸಮರ್ಪಕ ವಾಗಿ ಕಾರ್ಯ ಮಾಡಬಹುದು.ವಿಶ್ವ ಯೋಗ ದಿನದ ಅಂಗವಾಗಿ ಸರಕಾರಿ ನೌಕರ ಮತ್ತು ಅವರ ಕುಟುಂಬದವ ರಿಗಾಗಿ ಜಿಲ್ಲಾ ಘಟಕದಿಂದ 15 ದಿನಗಳ ವಿಶೇಷ ಯೋಗ ಶಿಬಿರವನ್ನು ಆಯೋಜಿಸಲಾಗಿದೆ.ಎಲ್ಲರೂ ಪಾಲ್ಗೋಳ್ಳಬೇ ಕೆಂದು ಅವರು ಹೇಳಿದರು.
ಪತಂಜಲಿ ಯೋಗ ಘಟಕದ ಜಿಲ್ಲಾ ಸಂಚಾಲಕ ಮಲ್ಲನ ಗೌಡ ಪಾಟೀಲ ಶಿಬಿರ ನಿರ್ವಹಿಸಿದರು.ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುಬ್ಬಾಪುರಮಠ, ಖಜಾಂಚಿ ರಾಜಶೇಖರ ಬಾಣದ, ಕ್ರೀಡಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಲಗಿ,ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ,ಉಪಾಧ್ಯಕ್ಷ ವಿನಯ ಮುಶ ಣ್ಣವರ,ನೌಕರ ಭವನದ ಕಾರ್ಯದರ್ಶಿ ಗಿರೀಶ ಚೌಡಕಿ ಮಾಜಿ ಅಧ್ಯಕ್ಷ ಎಸ್.ಕೆ.ರಾಮದುರ್ಗ,ಜಿಲ್ಲಾ ವಯಸ್ಕರ ಶಿಕ್ಷಾಣಾಧಿಕಾರಿ ಎ.ಎ.ಖಾಜಿ, ಕೆಜಿಐಡಿ ಅಧಿಕಾರಿ ಜೆ.ಸಿ ಕಠಾರಿ ಸೇರಿದಂತೆ ಇತರರು ಇದ್ದರು.