ಕಲಬುರಗಿ –
ಸಾಮಾನ್ಯವಾಗಿ ಸರ್ಕಾರಿ ನೌಕರಿಯಲ್ಲಿದ್ದುಕೊಂಡು ನಿವೃತ್ತಿಯ ನಂತರ ಮನೆಯಲ್ಲಿ ಕುಟುಂಬದವರೊಂದಿಗೆ ಕಾಳ ಕಳೆಯುತ್ತಾರೆ ಆದರೆ ಇಲ್ಲೊಬ್ಬರು ಶಿಕ್ಷಕರು ವೃತ್ತಿ ಯಿಂದ ನಿವೃತ್ತಿ ಯಾಗಿದ್ದರು ಕೂಡಾ ಪಾಠ ಬೋಧನೆ ಯನ್ನು ಮಾತ್ರ ಬಿಟ್ಟಿಲ್ಲ.ಹೌದು ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನದಂದು ಒಂದು ವಿಶೇಷ ಶಿಕ್ಷಕ ರೊಬ್ಬರು ನಮ್ಮ ಮುಂದೆ ರಾಜ್ಯದಲ್ಲಿ ಕಂಡು ಬರುತ್ತಿದ್ದಾರೆ ಬಹಳಷ್ಟು ಶಾಲೆಗಳಲ್ಲಿ ಗಣಿತ ಶಿಕ್ಷಕರಿಲ್ಲ ಗಣಿತ ಶಿಕ್ಷಕರು ಇಲ್ಲದ್ದರಿಂದ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ನಿವೃತ್ತಿಯಾಗಿ 18 ವರ್ಷಗಳಾದ ನಂತರ ಅದೇ ಉತ್ಸಾಹದಿಂದ ಇಲ್ಲೊಬ್ಬರು ಗಣಿತ ವಿಷಯ ಬೋಧಿಸುತ್ತಿದ್ದಾರೆ.
ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತಿಯಾಗಿ 18 ವರ್ಷಗಳಾಗಿದ್ದು ಸದ್ಯ 78 ವರ್ಷವಾಗಿರುವ ಯಶ್ವಂತ ರಾವ್ ಬಿರಾದಾರ ಅವರೇ ಗಣಿತ ಹೇಳಿಕೊಡುತ್ತಿರುವ ಗುರುಗಳು.ಪ್ರಸಕ್ತ ವರ್ಷ ನಡೆದ ಶಿಕ್ಷಕರ ಸಾರ್ವಜನಿಕ ವರ್ಗಾವಣೆಯಲ್ಲಿ ಭೈರಾಮಡಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಿಂದ ಆರು ಶಿಕ್ಷಕರು ಇದ್ದಾರೆ. ಹೀಗಾಗಿ ಗಣಿತ ಯಾರೂ ಬೋಧಿಸುತ್ತಿಲ್ಲ.ಕೊರೊನಾದಿಂದ ಮೊದಲೇ ಎರಡು ವರ್ಷದಿಂದ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳು ಎಲ್ಲವನ್ನು ಮರೆತಿದ್ದಾರೆ.ಕಬ್ಬಿಣದ ಕಡಲೆ ಯಾಗಿರುವ ಗಣಿತ ವಿಷಯವನ್ನು ಮರೆತಿದ್ದಾರೆ. ಇದನ್ನ ರಿತ ನಿವೃತ್ತ ಶಿಕ್ಷಕ ಯಶ್ವಂತರಾವ್ ಬಿರಾದಾರ ಶಾಲೆಗೆ ಬಂದು ಗಣಿತ ಬೋಧಿಸುತ್ತಿದ್ದು ನಿಜವಾಗಿಯೂ ಇವರ ಸೇವೆಯನ್ನು ಮೆಚ್ಚುವಂತಹದ್ದು ಮಾದರಿಯಾಗಿದ್ದಾರೆ ಈ ಹಿರಿಯ ಗುರುಗಳು…..