ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅ ವೈಜ್ಞಾನಿಕ ವರ್ಗಾವಣೆಯ ನೀತಿ ನಿಯಮದಿಂದಾಗಿ ರಾಜ್ಯದ ಶಿಲ್ಚಕರು ಬೇಸತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ವರ್ಗಾವಣೆ ಆರಂಭಗೊಂಡಿದ್ದರು ಕೂಡಾ ಬಹುತೇಕ ಶಿಕ್ಷಕರಿಗೆ ಈ ಒಂದು ಪ್ರಕ್ರಿಯೆ ಯಲ್ಲಿ ಅವಕಾಶ ಸಿಗದೇ ವಂಚಿತರಾಗಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತು ಏನೇಲ್ಲಾ ಪ್ರಯತ್ನ ಮಾಡತಾ ಇದ್ದಾರೆ ಶಿಕ್ಷಕರು ಆದರೂ ಕೂಡಾ ಪರಿಹಾರ ಮಾತ್ರ ಸಿಗುತ್ತಿಲ್ಲ ಕಾಣುತ್ತಿಲ್ಲ ಕೆಲ ಶಿಕ್ಷಕರು ಈ ಒಂದು ವರ್ಗಾವಣೆಯ ವಿರುದ್ಧ ಸಿಡಿದೆದ್ದು ನ್ಯಾಯಾಲಯಕ್ಕೆ ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಗೆದುಕೊಂಡು ಬರುತ್ತಿದ್ದು ಇದರಿಂದಾಗಿ ಮತ್ತೊಂದು ಸಮಸ್ಯೆ ಯನ್ನು ಶಿಕ್ಷಕರು ಅನುಭವಿಸುತ್ತಿ ದ್ದಾರೆ.
ನಿಜವಾಗಿಯೂ ಕೂಡಾ ಜೀವನವೇ ಸಾಕಪ್ಪ ಸಾಕು ಎಂದು ಕೊಂಡಿದ್ದಾರೆ ಶಿಕ್ಷಕರು. ವರ್ಗಾವಣೆಯ ನೋವಿಗೆ ಯಾರು ಕೂಡಾ ಸ್ಪಂದಿಸುತ್ತಿಲ್ಲ ಎಲ್ಲರಿಂದಲೂ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾತ್ರ ಆಗುತ್ತಿದ್ದು ಹೀಗಾಗಿ ಶಾಶ್ವತವಾದ ಸೂಕ್ತವಾದ ಪರಿಹಾರ ಸಿಗುತ್ತಿಲ್ಲ.ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರು ಮೌನವಾಗಿದ್ದಾರೆ.ಇತ್ತ ಶಿಕ್ಷಣ ಸಚಿವರು ಕೂಡಾ ಇಲಾಖೆಗಳ ಅಧಿಕಾರಿಗಳು ಮಾತ್ರ ಸುಮ್ಮನೆ ಇದ್ದಾರೆ. ಹೀಗಾಗಿ ನಾಡಿನ ಶಿಕ್ಷಕರು ನೋವು ನರಕಯಾತನೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ.