ಮಂಡ್ಯ –
ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ನೂತನವಾಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಏನೋ ನಿರ್ಮಾಣ ಮಾಡಲಾಗಿದ್ದು ಶಾಸಕರು ಇನ್ನೂ ಅದನ್ನು ಉದ್ಘಾಟನೆ ಮಾಡಿಲ್ಲವೆಂದು ಮಕ್ಕಳನ್ನು ಹೊರಗಡೆ ಕೂಡಿಸಿ ಪಾಠ ಮಾಡುತ್ತಿರುವ ಚಿತ್ರಣ ಮಂಡ್ಯದಲ್ಲಿ ಕಂಡು ಬಂದಿದೆ.
ಹೌದು ಶಾಲೆ ಒಳಗೆ ಕೂತು ಪಾಠ ಕೇಳಲು ಅವಕಾಶ ವಂಚಿತರಾಗಿದ್ದಾರೆ ಮಕ್ಕಳು.ಶಾಸಕರು ಉದ್ಘಾಟನೆ ಮಾಡಿಲ್ಲ ಎಂದು ಮಕ್ಕಳನ್ನು ಹೊರಗೆ ಕೂರಿಸಿ ಪಾಠವನ್ನು ಮಾಡಲಾಗುತ್ತಿದೆ.ಮಂಡ್ಯ ತಾಲ್ಲೂಕು ಹುಲಿಕೆರೆ ಗ್ರಾಮ ದಲ್ಲಿ ಈ ಒಂದು ಘಟನೆ ಕಂಡು ಬಂದಿದೆ.
ಹಿಂದೆ ಮಳೆಯ ಹಾನಿಗೆ ಒಳಗಾಗಿತ್ತು ಈ ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಶಾಲಾ ಆಡಳಿತ ಮಂಡಳಿಯ ಸಭೆಯಲ್ಲಿ ಈ ಹಿಂದೆಯೇ ಸೋಮವಾರದಿಂದ ಶಾಲೆ ಪ್ರಾರಂಭ ಮಾಡಬೇಕು ಎಂದು ತೀರ್ಮಾನವನ್ನು ಕೂಡಾ ತಗೆದುಕೊಳ್ಳಲಾಗಿತ್ತು.ಶಾಸಕರ ಗಮನಕ್ಕೆ ತರಬೇಕೆಂದು ಶಾಲಾ ಬಾಗಲು ತೆಗೆಯದ ಶಿಕ್ಷಕರು ಈಗ ಹೊರಗಡೆ ಕೂಡಿಸಿ ಪಾಠವನ್ನು ಮಾಡತಾ ಇದ್ದಾರೆ
ಇತ್ತೀಚಿಗಷ್ಟೇ ನೂತನವಾಗಿ ಈ ಒಂದು ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.ಸ್ಥಳೀಯ ಶಾಸಕರು ಉದ್ಘಾ ಟನೆ ಮಾಡಿಲ್ಲ ಎನ್ನುವ ನೆಪವನ್ನಿಟ್ಟುಕೊಂಡು ರಂಗ ಮಂದಿರದಲ್ಲಿ ಹಾಗೂ ಶಾಲೆಯ ಮುಂಭಾಗ ಕೂರಿಸಿ ಪಾಠವನ್ನು ಹೇಳುತ್ತಿದ್ದಾರೆ ಶಿಕ್ಷಕರು.ಈ ಒಂದು ನಡೆಯಿಂದ ಸ್ಥಳೀಯರು ಹಾಗೂ ಶಾಲಾ ಆಡಳಿತ ಮಂಡಳಿ ರವರಿಂದ ಆಕ್ರೋಶ ವ್ಯಕ್ತವಾಗಿದೆ.