ಬೆಂಗಳೂರು –
ಸಧ್ಯ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ ಸರ್ಕಾರಿ ಕೆಲಸಗಳಿಗೆ ತೊಂದರೆ ಯಾಗ ದಂತೆ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾ ರಾಜ್ಯದ ಸರ್ಕಾರಿ ನೌಕರರ ಬಗ್ಗೆ CM ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಸದನದಲ್ಲಿ ಮಾತನಾಡಿದ ಅವರು ರಾಜ್ಯದ ಸರ್ಕಾರಿ ನೌಕರರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ದರು ನಾಡ ದೊರೆ

ಇನ್ನೂ ಸಧ್ಯ ರಾಜ್ಯದಲ್ಲಿ ಎರಡು ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ.91 ಸಾವಿರ ಗುತ್ತಿಗೆ ನೌಕರರು ಕೆಲಸ ಮಾಡು ತ್ತಿದ್ದಾರೆ.ಅವರಲ್ಲಿ 57 ಸಾವಿರ ಅಕೌಶಲ್ಯ ಸಿಬ್ಬಂದಿಗಳಿ ದ್ದಾರೆ.ಶೇ.30ರಷ್ಟು ನಿರ್ಣಯ ತೆಗೆದುಕೊಳ್ಳುವ ಹುದ್ದೆಗ ಳಲ್ಲಿ ಪ್ರಬಾರ ಹುದ್ದೆಗಳು ನಿಬಾ ಯಿಸುವ ಮೂಲಕ ಸರ್ಕಾರಿ ಕೆಲಸಗಳಿಗೆ ತೊಂದರೆಯಾಗ ದಂತೆ ಸರ್ಕಾರಿ ನೌಕರರು ಸಹಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು