ರಾಜ್ಯದಲ್ಲಿ ಇಂದು ಕೂಡಾ ಹತ್ತು ಜನ ಶಿಕ್ಷಕರು ನಿಧನ – ತಲೆ ಕೆಡಿಸಿ ಕೊಳ್ಳುತ್ತಿಲ್ಲ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ – ಆತಂಕದಲ್ಲಿ ನಾಡಿನ ಶಿಕ್ಷಕ ಸಮುದಾಯ…..

Suddi Sante Desk

ಬೆಂಗಳೂರು –

ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಇಂದು ಕೂಡಾ ಹತ್ತು ಜನ ಶಿಕ್ಷಕರು ಮೃತರಾಗಿದ್ದಾರೆ. ಹೌದು ರಾಜ್ಯದ ಹಲವೆಡೆ ಕರೋನಾ ಸೋಂಕು ಕಾಣಿಸಿ ಕೊಂಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ದ್ದ ಶಿಕ್ಷಕರು ಚಿಕಿತ್ಸೆ ಫಲಿಸದೇ ಇಂದು ರಾಜ್ಯದ ಹಲ ವೆಡೆ ಮೃತರಾಗಿದ್ದಾರೆ.ಇಂದು ರಾಜ್ಯದ ಹಲವೆಡೆ ಮೃತರಾದ ಶಿಕ್ಷಕರ ಮಾಹಿತಿಯನ್ನು ನೋಡೊದಾ ದರೆ ಈ ಕೆಳಗಿನಂತಿದೆ

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಅಂಗಡಿ ನಿಧನರಾಗಿದ್ದಾರೆ.ಕಳೆದ ಒಂದು ವಾರದಿಂದ ಕಲಘಟಗಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನು ಮಾಡು ತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿ ದ್ದಾರೆ.ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನ ರಾಗಿದ್ದಾರೆ. ಇನ್ನೂ ಇವರ ನಿಧನಕ್ಕೆ ಕಲಘಟಗಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳಗದವರು ಸಂತಾಪ ವನ್ನು ಸೂಚಿಸಿದ್ದಾರೆ.

ಇನ್ನೂ ಶಾರದಾ ಕಿತ್ತೂರು ಸಹ ಶಿಕ್ಷಕಿ. ಧಾರವಾಡ ಜಿಲ್ಲೆಯ ಅಳ್ನಾವರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾ ಗಿದ್ದರು.ಇವರು ಕೂಡಾ ಕೋವಿಡ್ ಗೆ ಬಲಿಯಾಗಿ ದ್ದಾರೆ.ಕಳೆದ ಹತ್ತು ದಿನಗಳ ಹಿಂದೆ ಇವರಿಗೆ ಕೋವಿ ಡ್ ಸೋಂಕು ಕಾಣಿಸಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿ ತ್ಸೆ ಫಲಿಸದೇ ಇವರು ನಿಧನರಾಗಿದ್ದಾರೆ.ಇನ್ನೂ ಇವ ರ ನಿಧನಕ್ಕೆ ಶಾಲೆಯ ಶಿಕ್ಷಕರು ಮತ್ತು ಅಳ್ನಾವರ ಮತ್ತು ಧಾರವಾಡ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳದ ವರು ಸಂತಾಪವನ್ನು ಸೂಚಿಸಿದ್ದಾರೆ.

ಆರ್ ಜಿ ಹೊರ್ತಿ ಉಪನ್ಯಾಸಕರು ಬಾಲಕರ ಸರ್ಕಾ ರಿ ಪದವಿ ಪೂರ್ವ ಕಾಲೇಜು ವಿಜಯಪುರ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.ಕಳೆದ ವಾರ ಕೋವಿಡ್ ಕರ್ತವ್ಯದ ಮೇಲಿದ್ದ ಇವರಿಗೆ ಸೋಂಕು ಕಾಣಸಿಕೊಂಡು ಆರೋಗ್ಯ ಸಮಸ್ಯೆ ಉಂಟಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇವರು ಮೃತರಾಗಿ ದ್ದಾರೆ.ಇವರ ನಿಧನಕ್ಕೆ ಕಾಲೇಜಿನ ಮತ್ತು ತಾಲ್ಲೂಕಿನ ಸಮಸ್ತ ಉಪನ್ಯಾಸಕರು ಶಿಕ್ಷಕರು ಸಂತಾಪವನ್ನು ಸೂಚಿಸಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ಬೂದಿಹಾಳದ ಮುಖ್ಯ ಗುರುಗಳಾದ ಟಿ ವೈ ಕೂಗಟಿ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.ಇವರಿಗೂ ಕೂಡಾ ನಾಲ್ಕು ದಿನಗಳ ಹಿಂದೆ ಸೋಂಕು ಕಾಣಿಸಿ ಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಚಡಚಣದ ಯುವ ಉತ್ಸಾಹಿ ತರುಣ ಶಿಕ್ಷಕ ಮಂಜು ನಾಥ ಎನ್ ಆರ್ ಇವರು ಕೂಡಾ ಚಿಕ್ಕ ವಯಸ್ಸಿ ನಲ್ಲಿ ಕೋವಿಡ್ ಗೆ ಬಲಿಯಾಗಿದ್ದಾರೆ.31 ವಯಸ್ಸಿನ ಮಂಜುನಾಥ ಅವರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.ಸೋಂಕು ಕಾಣಿಸಿಕೊಂ ಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇನ್ನೂ ಬಿ ಎಚ್ ಬಾಲರಡ್ಡಿ ಮುಖ್ಯೋಪಾಧ್ಯಾಯ ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವನಾಳ ಬಾಗಲಕೋಟೆ ಇವರು ಕೂಡಾ ಕೋವಿಡ್ ಸೋಂ ಕು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೇ ಇಂದು ಆಸ್ಪ ತ್ರೆಯಲ್ಲಿ ಮೃತರಾಗಿದ್ದಾರೆ.ಇವರ ನಿಧನದಿಂದಾಗಿ ದೇವನಾಳ ಗುರು ಬಳದವರು ಸಂತಾಪವನ್ನು ಸೂಚಿಸಿದ್ದಾರೆ.

ಶ್ರೀಮತಿ ಪರಿಮಳ ಹೊಸಪೇಟೆಯ ಕಬ್ಬೇರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಇವ ರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇವರಿ ಗೆ ಸೋಂಕು ಕಾಣಿಸಿಕೊಂಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ನಿಧನರಾಗಿ ದ್ದಾರೆ.

ಗಾದಿಲಿಂಗಪ್ಪ ಬಳ್ಳಾರಿಯ ಭಾರತ ಸೇವಾದಳದ ಜಿಲ್ಲಾ ಸಂಘಟಕರು ಮತ್ತು ಶಿಕ್ಷಕ ಇವರು ಕೂಡಾ ಬಳ್ಳಾರಿ ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಯನ್ನು ಪಡೆಯುತ್ತಿದ್ದು ಇಂದು ನಿಧನರಾಗಿದ್ದಾರೆ.

ಪ್ರಭುದೇವ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಲಿಂಗಸೂರು ಇವರು ಕೂಡಾ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆಯುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿ ಸದೇ ನಿಧನರಾಗಿದ್ದಾರೆ.

ಇನ್ನೂ ಮೃತರಾದ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಜಿಲ್ಲೆಯ ಮತ್ತು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪವನ್ನು ಸಲ್ಲಿಸಿ ನಮನ ಸಲ್ಲಿಸಿದ್ದಾರೆ.ಶಿಕ್ಷಕ ಬಂಧುಗಳಾದ ಪವಾಡೆಪ್ಪ ಅಶೋಕ ಸಜ್ಜನ, ಗುರು ತಿಗಡಿ, ಎಸ್ ಎಫ್ ಪಾಟೀಲ, ಶರಣು ಪೂಜಾರ, ಬಾಬಾಜಾನ ಮುಲ್ಲಾ,ನಂದಕುಮಾರ ದ್ಯಾಪೂರ, ರಾಜೀವಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಶಂಕರ ಘಟ್ಟಿ, ಕಾಶಪ್ಪ ದೊಡವಾಡ ಸಿ ಎಂ ಹೂಲಿ,ಎಲ್ ಐ ಲಕ್ಕ ಮ್ಮನವರ ಮಲ್ಲಿಕಾರ್ಜುನ ಉಪ್ಪಿನ, ಹನುಮಂತ ಬೂದಿಹಾಳ, ಚಂದ್ರಶೇಖರ್ ಶೆಟ್ರು,ಶರಣಬಸವ ಬನ್ನಿಗೋಳ,ಆರ್ ನಾರಾಯಣಸ್ವಾಮಿ ಚಿಂತಾಮಣಿ ಜಿ ಟಿ ಲಕ್ಷ್ಮೀದೇವಮ್ಮ ಎಂ ವಿ ಕುಸುಮ, ವಿ ಎನ್ ಕೀರ್ತಿವತಿ, ಜೆ ಟಿ ಮಂಜುಳಾ,ಲತಾ ಎಸ್ ಮುಳ್ಳೂ ರು ಶ್ರೀಶೈಲ ತೆಗ್ಗಿ, ಸೇರಿದಂತೆ ಹಲವು ಶಿಕ್ಷಕ ಬಂಧು ಗಳು ಅಗಲಿದ ಇಬ್ಬರು ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ಕೂಡಲೇ ಮೃತ ಶಿಕ್ಷಕರಿಗೆ ರಾಜ್ಯ ಸರ್ಕಾರ ಸೂಕ್ತವಾದ ಪರಿಹಾರವನ್ನು ನೀಡು ವಂತೆ ಒತ್ತಾಯವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.