ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಸಾಕ್ಷ್ಯನಾಶ ಪ್ರಕರಣದಲ್ಲಿ ಜಾಮೀನು ದೊರೆತಿದೆ.ಹೌದು ಕಳೆದ ಒಂದು ವಾರದ ಹಿಂದೆಯಷ್ಟೇ 302 ಕೊಲೆ ಪ್ರಕರಣ ಪ್ರಕರಣದಲ್ಲಿ ಜಾಮೀನು ದೊರಕಿತ್ತು.ಇಂದು ಪ್ರಮುಖವಾದ ಸಾಕ್ಷ್ಯ ನಾಶ ಪ್ರಕರಣದಲ್ಲೂ ಜಾಮೀನು ದೊರೆತಿದೆ.
ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು.ಸಿಬಿಐ ಕಳೆದ ವರ್ಷ ನವೆಂಬರ್ ಐದರಂದು ಬಂಧನ ಮಾಡಲಾಗಿತ್ತು.
ಕಳೆದ 9 ತಿಂಗಳಿನಿಂದ ಹಿಂಡಲಗಾ ಕಾರಾಗೃಹದಲ್ಲಿ ಸೇರವಾಸದಲ್ಲಿದ್ದರು ಮಾಜಿ ಸಚಿವ ವಿನಯ ಕುಲಕರ್ಣಿ.ವಿನಯ ಕುಲಕರ್ಣಿ ಬಿಡುಗಡೆ ಭಾಗ್ಯ ದೊರೆತಿದ್ದು ನ್ಯಾಯಾಲಯ ಹಲವು ಸೂಚನೆ ಗಳನ್ನ ನೀಡಿದೆ.
ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂ ಧಸಿ ಜಾಮೀನು ಮಂಜೂರು ಮಾಡಲಾಗಿದ್ದು ಸಧ್ಯ ಬೆಳಗಾವಿ ಯ ಹಿಂಡಲಗಾ ಕಾರಾಗೃಹದಲ್ಲಿ ಇದ್ದಿದ್ದು ಇವತ್ತು ಇಲ್ಲವೇ ನಾಳೆ ಬಿಡುಗಡೆಯಾಗಲಿದ್ದಾರೆ.
ಇನ್ನೂ ಅತ್ತ ಜಾಮೀನು ಸಿಗುತ್ತಿದ್ದಂತೆ ಇತ್ತ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ಅಭಿಮಾನಿಗಳು ವಿನಯ ಕುಲಕರ್ಣಿ ಆಪ್ತರು ಸ್ವಾಗತ ಮಾಡಿಕೊಳ್ಳಲು ಸಿದ್ದ ರಾಗಿದ್ದಾರೆ