ಬೆಂಗಳೂರು –
ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಯೊಗೀಶಗೌಡ ಕೊಲೆ ಪ್ರಕರಣ ದಲ್ಲಿ ಬಂಧನವಾಗಿರುವ ವಿನಯ ಕುಲಕರ್ಣಿಗೆ ಕೊನೆಗೂ ಸರ್ವೋಚ್ಚ ನ್ಯಾಯಾಲಯ ಜಾಮೀನ ನ್ನು ನೀಡಿದೆ.ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಕೊನೆಗೂ ಷರತ್ತು ಬದ್ದ ಜಾಮೀನ ನ್ನು ನೀಡಿದೆ.ಇಂದು ಬೆಳಿಗ್ಗೆ ಮತ್ತೆ ಈ ಕುರಿತಂತೆ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಕೆಲವು ಷರತ್ತುಗಳನ್ನು ಹಾಕಿ ಜಾಮೀನನ್ನು ನೀಡಿದೆ. ಧಾರವಾಡಗೆ ಯಾವುದೇ ಕಾರಣಕ್ಕೂ ಹೊಗುವಂ ತಿಲ್ಲ ಎಂಬ ಷರತ್ತನ್ನು ನೀಡಿ ಜಾಮೀನನ್ನು ನೀಡಿ ಆದೇಶವನ್ನು ನೀಡಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಿದೆ.ವಿನಯ ಪರ ಜಾಮೀನು ಅರ್ಜಿ ಸಲ್ಲಿಸಿ ವಾದ ಮಂಡಿಸಿರುವ ಖ್ಯಾತ ವಕೀಲ ಮುಕುಲ್ ರೋಹಟಗಿ.ಮುಕುಲ್ ರೋಹಟಗಿ, ಕಪಿಲ್ ಸಿಬಲ್,ಸಿದ್ದಾರ್ಥ ಎಂಬ ಮೂವರು ವಕೀಲರನ್ನು ನೇಮಿಸಿದ್ದರು ವಿನಯ ಕುಲಕರ್ಣಿ. ವಿನಯ ಸೋದರ ಮಾವ ಚಂದ್ರಶೇಖರ ಇಂಡಿ ಪರ ವಕೀಲ ಕಾಮತ ವಕಾಲತ್ತು ವಹಿಸಿದ್ದರು ಕಳೆದ 9 ತಿಂಗಳಿನಿಂದ ಜೈಲಿನಲ್ಲಿರುವ ವಿನಯ ಕುಲಕರ್ಣಿ