ಬೆಂಗಳೂರು –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಈಗಾಗಲೇ ವಿಚಾರಣೆ ನಡೆಸಿರುವ ಬೆಂಗಳೂರಿನ ಹೈಕೋರ್ಟ್ ಪೀಠ ಇಂದು ಅಂತಿಮ ವಿಚಾರಣೆ ಮಾಡಲಿದೆ
ಈಗಾಗಲೇ ಬಹುತೇಕ ಮಟ್ಟದಲ್ಲಿ ವಿಚಾರಣೆ ಮಾಡಿರುವ ನ್ಯಾಯಮೂರ್ತಿಗಳು ಇಂದು ಮತ್ತೆ ವಿಚಾರಣೆ ಮಾಡಿ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಈಗಾಗಲೇ ಎರಡು ಮೂರು ಬಾರಿ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನಲೆಯಲ್ಲಿ ಇಲ್ಲಿಯಾದರೂ ಜಾಮೀನು ಸಿಗುವ ವಿಶ್ವಾಸವನ್ನು ವಿನಯ ಕುಲಕರ್ಣಿ ಆಪ್ತರು ಇಟ್ಟು ಕೊಂಡಿದ್ದಾರೆ