ಅತಿಯಾದ ಮೊಬೈಲ್ ಬಳಕೆ, ಓದುವ ಹವ್ಯಾಸವನ್ನು ಕಡಿಮೆ ಮಾಡಿದೆ ಪವಿತ್ರಾ ಪಾಟೀಲ – ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ …..

Suddi Sante Desk
ಅತಿಯಾದ ಮೊಬೈಲ್ ಬಳಕೆ, ಓದುವ ಹವ್ಯಾಸವನ್ನು ಕಡಿಮೆ ಮಾಡಿದೆ ಪವಿತ್ರಾ ಪಾಟೀಲ – ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ …..

ಧಾರವಾಡ

ಅತಿಯಾದ ಮೊಬೈಲ್ ಬಳಕೆ, ಓದುವ ಹವ್ಯಾಸ ವನ್ನು ಕಡಿಮೆ ಮಾಡಿದೆ ಪವಿತ್ರಾ ಪಾಟೀಲ  ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ….. ನಡೆಯಿತು ಸಂಪನ್ಮೂಲ ಶಿಕ್ಷಕರ ತರಬೇತಿ ಶಿಬರ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಅಬ್ದುಲ್ ನಜೀರ ಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಧಾರವಾಡದ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕಿ ಪವಿತ್ರಾ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ರೂಡಿಸಿ, ಮಕ್ಕಳಲ್ಲಿ ಹುದುಗಿರುವ ಸಾಹಿತ್ಯವನ್ನು ಹೊರ ಹಾಕಲು ಮಕ್ಕಳ ಸಾಹಿತ್ಯ ಹಬ್ಬವನ್ನು ರಾಜ್ಯದ 74 ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ, ಶಿಕ್ಷಕರ ಜೊತೆಗೆ ಮಕ್ಕಳನ್ನು ಸೇರಿಸಿ, ತರಬೇತಿ ನೀಡಿ ಓದುವ ಹವ್ಯಾಸವನ್ನು ರೂಪಿಸುವುದು ಈ ಸಾಹಿತ್ಯ ಸಂಭ್ರಮದ‌ ಪ್ರಮುಖ ಉದ್ದೇಶವಾಗಿದೆ ಎಂದರು

ರಾಯಾಪೂರದ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ, ಜರುಗಿದ ಸಂಪನ್ಮೂಲ ಶಿಕ್ಷಕರ ತರಬೇತಿ ಶಿಬರದ ಉದ್ಘಾಟನಾ ಶಿಬಿರದ ಉದ್ಘಾಟನೆಯನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎಫ್ ಸಿ ಚೇಗರಡ್ಡಿ ಮಾತನಾಡಿ ಗ್ರಂಥಾಲಯ ಗಳು ಮಕ್ಕಳ ಭೌದ್ಧಿಕ ವಿಕಾಸದ ಕೇಂದ್ರಗಳಾಗ ಬೇಕು ಅರಿವಿನ ಕೇಂದ್ರಗಳಾಗಬೇಕು,ಮಕ್ಕಳಿಗೆ ಗ್ರಂಥಾಲಯ ಬಳಸುವ ಅಭಿರುಚಿ ಹೆಚ್ಚಿಸುವು ದು ಗ್ರಾಮದ ಸಾಹಿತ್ಯದ ಚಟುವಟಿಕೆಗಳ ಕೇಂದ್ರ ಗಳಾಗಬೇಕು,

ಮಕ್ಕಳ ಅನುಭವದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು,ಗ್ರಂಥಾಲಯಗಳಲ್ಲಿ ಮಕ್ಕಳ ಪುಸ್ತಕಗಳು ಸಿಗುವಂತಾಗಬೇಕು ಎಂದರು ಮುಖ್ಯ ಅತಿಥಿಯಾಗಿದ್ದ, ಶಾಲಾ ಶಿಕ್ಷಣ ಇಲಾಖೆ  ಜಿಲ್ಲಾ ಉಪ ನ್ವಯಾಧಿಕಾರಿ ಎಸ್ ಹುಡೇದಮನಿ, ಡಾ, ಬಿ ಆರ್ ಅಂಬೇಡ್ಕರ್ ಹೇಳಿದಂತೆ, ನಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಂಡು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ರೂಡಿಸುವುದು,ಅತೀ ಅವಶ್ಯಕ ವಾಗಿದೆ ಎಂದರು,

ಈ ನಿಟ್ಟಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಹಕಾರದೊಂದಿಗೆ ಶಿಕ್ಷಕರು ಮತ್ತು ಮಕ್ಕಳಿಗೆ ತರಬೇತಿಯನ್ನು ನೀಡಿ, ಓದುವ ಅಭಿ ರುಚಿಯನ್ನು ಹೆಚ್ವಿಸುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಧಾರವಾಡ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಸಮನ್ವಯಾಧಿಕಾರಿ ಮಂಜುನಾಥ ಅಡವೇರ ಗುರು ತಿಗಡಿ ಕಾರ್ಯ ಕ್ರಮ ಸಂಯೋಜಕ ನೀಲಪ್ಪ ಕಜ್ಜರಿ, ಬೋಧಕ ರಾದ ರಮೇಶ ಪರಮಣ್ಣವರ ರಾಜ್ಯ ಸಂಪ ನ್ಮೂಲ ಶಿಕ್ಷಕರಾದ ನಿಂಗು ಸೊಲಗಿ,

ಶಿಲ್ಪ ಹಳ್ಳಿಕೇರಿ ಸಂದ್ಯಾ ನಾಯ್ಕ ಅಕ್ಷತಾ ಕೂಡ್ಲಾ ಚೇತನ ಕೊಪ್ಪ ಸಿದ್ದು ಮಾಳವಾಡ ಪ್ರಕಾಶ ಕರ್ಲಿಕಟ್ಟಿ ವಾಯ್ ಬಿ ಪಾಟೀಲ ಮುಂತಾದವರು ಇದ್ದರು. ವಿವೇಕಾನಂದಗೌಡ ಪಾಟೀಲ ಸ್ವಾಗತಿ ಸಿದರು ಪಾಂಡುರಂಗ ಜಟಗಣ್ಣವರ ನಿರೂಪಿಸಿ ದರು. ಎಲ್ ಐ ಲಕ್ಕಮ್ಮನವರ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.