ಬೆಂಗಳೂರು –
ಅಶ್ಲೀಲ ಸಿಡಿ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ SIT ಅಧಿಕಾರಿಗಳು ಮಹತ್ವದ ಅಚ್ಚರಿಯ ಬೆಳವ ಣಿಗೆಯೊಂದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರ ಮೊಬೈಲ್ ಫೋನ್ ವಶಕ್ಕೆ ತೆಗೆದು ಕೊಂಡಿದ್ದಾರೆ.ಸೆಕ್ಸ್ ಸಿ.ಡಿ. ಪ್ರಕರಣದ ತನಿಖೆ ನಡೆಸು ತ್ತಿರುವ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೊಬೈಲ್ ಫೋನನ್ನು ತಮ್ಮ ವಶಕ್ಕೆ ತೆಗೆದುಕೊಂಡು FSL ಗೆ ಕಳಿಸಿದ್ದಾರೆ.

ಸೆಕ್ಸ್ ಸಿ.ಡಿ.ಯಲ್ಲಿದ್ದ ಯುವತಿಯ ಜೊತೆ ಮಾಜಿ ಸಚಿವರು ವಿಡಿಯೋ ಕಾಲ್ ಮಾಡಿ ಮಾತನಾಡಿರು ವ ವಿಡಿಯೋ ಕೂಡ ಈ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಯುವತಿಯ ಜೊತೆಗಿನ ಸಂಪರ್ಕ ಮತ್ತು ಸಂಬಂಧದ ಕುರಿತು ಪ್ರಶ್ನಿಸಲು ಇತ್ತೀಚೆಗೆ ಎರಡು ಬಾರಿ ಎಸ್‌ಐಟಿ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ಸಂದರ್ಭದಲ್ಲಿ, ಯುವತಿಯ ಜತೆಗಿನ ವಿಡಿಯೋ ಕಾಲ್ ಕುರಿತು ಪ್ರಶ್ನಿಸಿದಾಗ, ಮಾಜಿ ಸಚಿವರು ಸಮರ್ಪಕ ಉತ್ತರ ನೀಡಿರಲಿಲ್ಲ. ಅಲ್ಲದೇ ನನಗೆ ಮೊಬೈಲ್ ಫೋನ್ ನಲ್ಲಿ ಇಂಟರ್‌ನೆಟ್ ಅನ್ನೇ ಸರಿಯಾಗಿ ಉಪಯೋಗಿ ಸಲು ಬರುವುದಿಲ್ಲ. ಇನ್ನು ವಿಡಿಯೋ ಕಾಲ್ ಎಲ್ಲಿಂದ ಮಾಡಲಿ ಎಂದು ಉತ್ತರಿಸಿದ್ದರು.ಹೀಗಾಗಿ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಪರಿಶೀಲಿಸಿದ್ದಾರೆ. ನಂತರ ಅದರಲ್ಲಿರುವ ಡೇಟಾ ಕೂಡ ರಿಟ್ರೀವ್ ಮಾಡಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳಿಸಿ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿ ದ್ದಾರೆ.