ಬೆಂಗಳೂರು –
ರಾಜ್ಯಾಧ್ಯಂತ ದಿನದಿಂದ ದಿನಕ್ಕೆ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯ ಒತ್ತಡ ಹೆಚ್ಚಾಗುತ್ತಿದ್ದು ಈಗಾಗಲೇ ಹಲವಾರು ಸಂಘಟನೆಗಳು ಒತ್ತಾಯವನ್ನು ಮಾಡಿದ್ದು ಇನ್ನೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರು ಕೂಡಾ ಮಧ್ಯಂತರ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯವನ್ನು ಮಾಡಿದ್ದು ರಾಜ್ಯದ ಶಿಕ್ಷಕರ ಧ್ವನಿಯಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಶಿಕ್ಷಣ ಸಚಿವರಿಗೆ ಮನವಿಯನ್ನು ಮಾಡಿದ್ದಾರೆ.
ಪತ್ರದ ಮೂಲಕ ಅಕ್ಟೋಬರ್ 31 ರವರೆಗೆ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.ಇನ್ನೂ ಇದರೊಂ ದಿಗೆ ದಿನದಿಂದ ದಿನಕ್ಕೆ ಈ ಒಂದು ದಸರಾ ರಜೆ ವಿಸ್ತರಣೆಯನ್ನು ಮಾಡುವಂತೆ ರಾಜ್ಯಾಧ್ಯಂತ ಕೂಗು ಜೋರಾಗುತ್ತಿದ್ದು ಹೀಗಾಗಿ ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಸಚಿವರು ದಸರಾ ರಜೆಯನ್ನು ವಿಸ್ತರಣೆ ಮಾಡತಾರೆ ಎಂಬೊದನ್ನು ಕಾದು ನೋಡಬೇಕಿದೆ.