ಬೆಂಗಳೂರು –
ಮಹಾಮಾರಿ ಕರೋನ ಇನ್ನೂ ಪೂರ್ಣ ಪ್ರಮಾಣ ದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ.ಹೀಗಾಗಿ ಕೇಂದ್ರ ಸರ್ಕಾರ ಕೇಂದ್ರ ದಲ್ಲಿನ ಶಾಲೆಗಳಿಗೆ ಹತ್ತು ದಿನಗಳ ರಜೆಯನ್ನು ವಿಸ್ತರಣೆ ಮಾಡಿದೆ.ರಜೆಯನ್ನು ವಿಸ್ತರ ಣೆ ಮಾಡಿ ಎಂದು ಯಾರು ಒತ್ತಾಯ ಮಾಡದಿ ದ್ದರೂ ಕೂಡಾ ಮುಂಚಿತವಾಗಿ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಇದು ಕೇಂದ್ರ ಸರ್ಕಾರವು ಶಿಕ್ಷಕರ ಕುರಿತು ಮುಂಚಿತ ವಾಗಿ ತಗೆದುಕೊಂಡಿರುವ ನಿರ್ಧಾರವಾಗಿದೆ.ಇನ್ನೂ ರಾಜ್ಯದಲ್ಲಿನ ಪರಿಸ್ಥಿತಿ ಕೂಡಾ ವಿಭಿನ್ನವಾಗಿದೆ ಇಲ್ಲಿ ಕೂಡಾ ಇನ್ನೂ ಕೋವಿಡ್ ಸೋಂಕು ಕಡಿಮೆಯಾಗಿ ಲ್ಲ ನಗರ ಪ್ರದೇಶಗಳಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್ನೂ ಇದೆ ಇದರ ಜೊತೆಯಲ್ಲಿ ಮೂರನೆಯ ಅಲೆಯ ಆತಂಕ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರ ಸಾವು ಹೀಗಾಗಿ ಇದನ್ನೇಲ್ಲವನ್ನು ಅರಿತ
ಗ್ರಾಮೀಣ ಶಿಕ್ಷಕರ ಸಂಘ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಇವರೊಂದಿಗೆ ವಿಧಾನ ಪರಿಷತ್ ನ ಸರ್ವ ಸದಸ್ಯರು ರಜೆಯನ್ನು ವಿಸ್ತರಣೆ ಮಾಡಿ ಎಂದು ಒತ್ತಾಯ ಮಾಡಿದರು ಪತ್ರವನ್ನು ಬರೆದರು ಆದರೂ ಕೂಡಾ ಸರ್ಕಾರ ಶಿಕ್ಷಣ ಸಚಿವರು ತಲೆಕೆಡಿಸಿಕೊ ಳ್ಳುತ್ತಿಲ್ಲ ಹೀಗಾಗಿ ಜೂನ್ 15 ರಿಂದ ಶಿಕ್ಷಕರು ಶಾಲೆಗಳಿಗೆ ಕಡ್ಡಾಯ ವಾಗಿ ಹಾಜರಾ ಗಲು ಸೂಚನೆ ನೀಡಿದ್ದು ಒಂದು ಕಡೆ ಲಾಕ್ ಡೌನ್ ಮತ್ತೊಂದು ಕಡೆಗೆ ಬಸ್ ಸಂಚಾರ್ ಬಂದ್ ಹೀಗಿರು ವಾಗ ಶಿಕ್ಷಕರು ಶಾಲೆಗಳಿಗೆ ಹೇಗೆ ಹೋಗಬೇಕು ಎಂಬ ಪರಿಜ್ಞಾನ ಇಲ್ಲ ಇಲಾಖೆಯ ಅಧಿಕಾರಿಗಳಿಗೆ ಹೀಗಾಗಿ ಏನು ಮಾಡಬೇಕು ಎಂಬ ದೊಡ್ಡ ಗೊಂದ ಲದಲ್ಲಿ ನಾಡಿನ ಶಿಕ್ಷಕರಿದ್ದಾರೆ.ಕೇಂದ್ರ ಸರ್ಕಾರಕ್ಕೆ ಯಾರು ಒತ್ತಾಯ ಮಾಡದಿದ್ದರೂ ಮುಂಜಾಗ್ರತಾ ದೃಷ್ಟಿಯಿಂದ ರಜೆ ವಿಸ್ತರಣೆ ಮಾಡಿದ್ದು ಇನ್ನೂ ಒತ್ತಾಯ ಮಾಡಿದರು ರಜೆಯನ್ನು ವಿಸ್ತರಣೆ ಮಾಡದಿರೊದು ದುರಂತವೇ ಸರಿ.