ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ದಿನಾಂಕ ಡಿ.4ರಂದು ನಡೆದ ಚುನಾವಣೆಯಲ್ಲಿ ಹಾಲಿ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ಬಣ ಮೇಲುಗೈಯನ್ನು ಸಾಧಿಸಿದೆ.ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನ.27ರಂದು 13 ಜಿಲ್ಲೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು
ಡಿ.4ರಂದು ನಡೆದ ಉಳಿದ 18 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರು ಆಯ್ಕೆಯಾಗಿರುತ್ತದೆ. ಒಟ್ಟು 31 ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ 27 ಜಿಲ್ಲೆಗಳಲ್ಲಿ ಸಿ.ಎಸ್. ಷಡಾಕ್ಷರಿ ಅವರ ಬಣ ಜಯಭೇರಿ ಬಾರಿಸಿದೆ.ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ 102 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 95 ಸ್ಥಾನಗಳಲ್ಲಿ ಸಿ.ಎಸ್. ಷಡಾಕ್ಷರಿ ಅವರ ಬಣ ಜಯಭೇರಿ ಬಾರಿಸುವ ಮೂಲಕ ಮೇಲುಗೈ ಸಾಧಿಸಿದೆ.
ನ.9ರಂದು ರಿಂದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭವಾಗಿ, ಡಿ.27ರಂದು ಮತದಾನ ನಡೆಯಲಿದೆ.ಕೇಂದ್ರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಜಿಲ್ಲೆ, ತಾಲೂಕು, ಯೋಜನೆ ಶಾಖೆಗಳ ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಸೇರಿ ಅಂದಾಜು 950ಕ್ಕೂ ಹೆಚ್ಚು ಮತದಾರರು ಚುನಾವಣೆ ಯಲ್ಲಿ ಪಾಲ್ಗೊಳಲಿದ್ದಾರೆ.
ಈ ಪೈಕಿ ಸುಮಾರು 95% ಕ್ಕಿಂತ ಹೆಚ್ಚು ಮತದಾರರು ಸಿ.ಎಸ್. ಷಡಾಕ್ಷರಿ ರವರ ಬಣದಿಂದ ಆಯ್ಕೆಯಾಗಿ ದ್ದಾರೆ ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರತಿಕ್ರಿಯಿಸಿ ಮಾತನಾಡಿ ಹಿಂದಿನ ಅವಧಿಯಲ್ಲಿ ನಮ್ಮ ತಂಡ ಮಾಡಿರುವ ಕೆಲಸವನ್ನು ರಾಜ್ಯದ ಸರ್ಕಾರಿ ನೌಕರರು ಗುರುತಿಸಿ ನಮ್ಮ ತಂಡಕ್ಕೆ ಆಶೀರ್ವದಿಸಿದ್ದಾರೆ.
ಆ ಕಾರಣದಿಂದ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಬಣದ ಪದಾಧಿಕಾರಿಗಳು ಆಯ್ಕೆ ಆಗಲು ಸಾಧ್ಯವಾ ಗಿದೆ. ಮುಂದೆಯು ಸಹ ಸರ್ಕಾರಿ ನೌಕರರ ನಮ್ಮ ಮೇಲೆ ಇಟ್ಟಿರುವ ಭರವಸೆ ಹಾಗೂ ವಿಶ್ವಾಸವನ್ನು ಉಳಿಸಿ ಕೊಳ್ಳುವ ಪ್ರಮಾಣಿಕ ಜವಾಬ್ದಾರಿಯು ನಮ್ಮ ತಂಡ ದ್ದಾಗಿದೆ. ಸಮಸ್ತ ಸರ್ಕಾರಿ ನೌಕರರಿಗೆ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..