ಬೆಂಗಳೂರು –

ಹುಸಿ ಬಾಂಬ್ ಬೆದರಿಕೆ ಇ ಮೇಲ್ ಪ್ರಕರಣ ಇನ್ನು ನಿಂತಿಲ್ಲ.ಬೆದರಿಕೆ ಬಂದ ಶಾಲೆಗಳ ಸಂಖ್ಯೆ ಒಟ್ಟು 17ಕ್ಕೆ ಏರಿಕೆಯಾಗಿದೆ. ನಿನ್ನೆ ಹೊಸ ಮೂರು ಶಾಲೆಗಳಿಗೆ ಇ ಮೇಲ್ ಮಾಡಿರೋದು ಪತ್ತೆಯಾಗಿದೆ.ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ವರ್ತೂ ರಿನ ಹಾರ್ವೆಸ್ಟ್ ಶಾಲೆ, ಹೆಚ್ ಎ ಎಲ್ ಖಾಸಗಿ ಶಾಲೆ ಸೇರಿದಂತೆ ಮೂರು ಶಾಲೆಗೆ ಇ-ಮೇಲ್ ಕಳುಹಿಸಲಾಗಿತ್ತು. ಮಾಹಿತಿ ಬಂದ ಕೂಡಲೇ ಶಾಲೆಗೆ ತೆರಳಿದ ಅಧಿಕಾರಿಗಳು ಪರಿಶೀಲನೆ ಮಾಡಿದರು. ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಹಿಂದೆ ಇರುವವರ್ಯಾರು..? ಮೂರು ದಿನ ಕಳೆದರೂ ಯಾವುದೇ ಕ್ಲೂ ಸಿಕ್ಕಿಲ್ಲ.ಸದ್ಯ ಟೆಕ್ನಿಕಲ್ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮೊರೆ ಹೋಗಿದ್ದಾರೆ.ಇನ್ನೂ ಮಾಹಿತಿಗಾಗಿ ಪೊಲೀಸರು ಕಾದು ಕುಳಿತಿದ್ದು ಸದ್ಯ ಒಂದರ ನಂತರ ಒಂದರಂತೆ ಬೆದರಿಕೆ ಸಂದೇಶಗಳ ಪಟ್ಟಿ ಬಿಡಲಾ ಗಿದೆ.ಇನ್ನು ಮತ್ತಷ್ಟು ಶಾಲೆಗಳಿಗೂ ಬೆದರಿಕೆ ಸಂದೇಶ ಕಳುಹಿಸಿರೊ ಶಂಕೆ ವ್ಯಕ್ತವಾಗಿದೆ.