ತುಮಕೂರು –
ಮಾಸ್ಕ್ ಧರಿಸಿ ಬೇರೆಯವರಿಗಾಗಿ SSLC ಪರೀಕ್ಷೆ ಬರೆ ಯಲು ಬಂದ ನಕಲಿ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದ ಘಟನೆ
ತುಮಕೂರಿನ ತಿಪಟೂರು ಟ್ಯಾಗೂರ್ ಶಾಲೆಯಲ್ಲಿ ಕಂಡು ಬಂದಿದೆ.ನಿನ್ನೆ ಕೊನೆಯ ಪರೀಕ್ಷೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಬೇರೆಯವರಿಗಾಗಿ SSLC ಪರೀಕ್ಷೆ ಬರೆಯಲು ಬಂದು ನಕಲಿ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

ಮಂಜುನಾಥ್ ಎ ಎಂಬುವನ ಬದಲಿಗೆ ಮುರಳೀಧರ್ ಎಂಬಾತ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾ ಕೊಠಡಿ ವೀಕ್ಷಕರಿಂದ ಪರಿಶೀಲನೆ ವೇಳೆ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.ಮಾಸ್ಕ್ ತೆಗೆಸಿ ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ ಬಳಿಕ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮುರಳೀಧರ್ ನಿಂದ ಅಪಾಲಜಿ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.