ಧಾರವಾಡ –
ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಫಕೀರಪ್ಪ ಇನ್ನೂ ನೆನಪು ಮಾತ್ರ – ಸಣ್ಣ ವಯಸ್ಸಿನ ಪೈಲ್ವಾನ್ ನಿಧನದ ಸುದ್ದಿ ಕೇಳಿ ಶಾಕ್ ಗೊಂಡ ಜಿಲ್ಲೆಯ ಕುಸ್ತಿಪಟುಗಳು
ಧಾರವಾಡ ಜಿಲ್ಲೆಯ ಯುವ ಕುಸ್ತಿಪಟು ಫಕೀರಪ್ಪ ಲಕ್ಷ್ಮಪ್ಪ ಬೋಸನೂರು ನಿಧನರಾ ಗಿದ್ದಾರೆ.ಧಾರವಾಡ ತಾಲ್ಲೂಕಿನ ಕರಡಿಕೊಪ್ಪ ಗ್ರಾಮದವರಾಗಿದ್ದ ಫಕೀರಪ್ಪ ಅವರು ಕುಸ್ತಿ ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆಯನ್ನು ಮಾಡಿದ್ದರು.ಬಯಲು ಕುಸ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೆ ಹಾಕಿಕೊಂಡಿದ್ದ ಇವರು ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಎಂದೇ ಹೆಸರಾಗಿದ್ದರು.
ಯುವ ಉತ್ಸಾಹಿ ಕುಸ್ತಿ ಪಟು ಎಂದೇ ಹೆಸರಾಗಿದ್ದ ಇವರ ನಿಧನಕ್ಕೆ ಜಿಲ್ಲೆಯ ಇವರ ಅಪಾರ ಅಭಿ ಮಾನಿಗಳು ಆಪ್ತರು ಸ್ನೇಹಿತರು ಸೇರಿದಂತೆ ಹಲವರು ಕಂಬನಿಯನ್ನು ಮಿಡಿದಿದ್ದಾರೆ.ಇನ್ನೂ ಆರೋಗ್ಯವಾಗಿದ್ದ ಫಕೀರಪ್ಪನಿಗೆ ಏಕಾಎಕಿಯಾಗಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾ ಯಿತು
ಆದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಕುಸ್ತಿ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ. ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಎಂದೇ ಗುರುತಿಸಿಕೊಂಡಿದ್ದ ಫಕೀರಪ್ಪ ಅವರ ಸಾವು ಜಿಲ್ಲೆಯ ಪೈಲ್ವಾನರಿಗೆ ಶಾಕ್ ನೀಡಿದ್ದು ಅಕಾಲಿಕ ನಿಧನದ ಸುದ್ದಿ ಮನಸ್ಸಿಗೆ ನೋವುಂಟಾ ಗಿದ್ದು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಭಗವಂ ತನಲ್ಲಿ ಜಿಲ್ಲೆಯ ಕುಸ್ತಿ ಪಟುಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..