ತುಮಕೂರು –
ಗ್ರಾಮಸ್ಥರು ನಿವೃತ್ತಗೊಂಡ ಶಿಕ್ಷಕರೋರ್ವರನ್ನು ಅಲಂ ಕೃತಗೊಂಡ ವಾಹನದಲ್ಲಿ ಮೆರವಣಿಗೆ ಮಾಡಿ ವಿಶೇಷವಾಗಿ ಬೀಳ್ಕೊಡುಗೆ ಮಾಡಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ಹೌದು ನಿವೃತ್ತರಾದ ಸರಕಾರಿ ಶಾಲೆಯ ಶಿಕ್ಷಕರೋರ್ವ ರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ಅಭಿ ಮಾನ ಮೆರೆದ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ರಂಗ ನಾಥಪುರ ಗ್ರಾಮದಲ್ಲಿ ನಡೆದಿದೆ.ಶಿಕ್ಷಕ ಬಿ.ಚಂದ್ರಶೇಖ ರಯ್ಯ ಅವರನ್ನು ಗ್ರಾಮಸ್ಥರು ಈ ರೀತಿ ವಿಶೇಷವಾಗಿ ಬೀಳ್ಕೊಟ್ಟಿದ್ದಾರೆ.
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಚಂದ್ರ ಶೇಖರಯ್ಯ ನಿವೃತ್ತಿ ಹೊಂದಿದ್ದರು.ಇವರ ಸೇವೆಯನ್ನು ಪರಿಗಣಿಸಿ,ಹೂವಿನಿಂದ ಅಲಂಕೃತವಾದ ರಥದಲ್ಲಿ ಗ್ರಾಮ ದಲ್ಲಿ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮಸ್ಥರ ಅಭಿಮಾನಕ್ಕೆ ಮನಸೋತ ಶಿಕ್ಷಕ ಚಂದ್ರಶೇಖರ ಯ್ಯ ಕೂಡ ಶಾಲೆಯ ಹೆಸರಿಗೆ 50 ಸಾವಿರ ರೂ.ಗಳನ್ನು ದಾನವಾಗಿ ನೀಡಿದ್ದಾರೆ.ಪ್ರತಿ ವರ್ಷ ಈ ಮೊತ್ತದ ಬಡ್ಡಿಯ ಹಣವನ್ನು ಬಳಸಿಕೊಂಡು ಶಾಲೆಯ ಬಡ ಮಕ್ಕಳಿಗೆ ಉಚಿ ತವಾಗಿ ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿದರು.
ಇದು ನನ್ನ ಮೂರನೆಯ ಶಾಲೆ ಸುಮಾರು 24 ವರ್ಷಗ ಳಿಂದ ನಾನು ಇಲ್ಲಿ ಕೆಲಸ ಮಾಡಿದ್ದು ಇದುವರೆಗೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ಇಡೀ ಗ್ರಾಮವೇ ನನ್ನನ್ನು ಸಾಕಿದೆ.ನಿವೃತ್ತಿ ಎಂಬುದು ಸರಕಾರಿ ನಿಯಮ. ಆದರೆ ಇಲ್ಲಿನ ಬಾಂಧವ್ಯ,ಪ್ರೀತಿ,ವಿಶ್ವಾಸವನ್ನು ಎಂದಿಗೂ ಮರೆಯಲಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿಯೂ ಅನುಕೂಲವಾಗಬೇಕು ಎಂದು ನಿರ್ಧಾರ ಮಾಡಿ,ವಿದ್ಯಾರ್ಥಿಗಳಿಗಾಗಿ 50 ಸಾವಿರ ಹಣ ವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದು,ಅದರಲ್ಲಿ ಬಂದ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ವಿದ್ಯಾರ್ಥಿ ಗಳಿಗೆ ಪುಸ್ತಕ ಹಾಗೂ ನೋಟ್ ಬುಕ್ ವಿತರಿಸುವಂತೆ ಮನವಿ ಮಾಡಿದ್ದೇನೆ.ನನ್ನ ಮಗನೂ ಸಹ ಶಾಲೆಯ ಮುಂಭಾಗದ ಬೋರ್ಡ ನ್ನು 50 ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದು,ನನಗೆ ಇದುವರೆಗೂ ಕೊಟ್ಟ ಸಹಕಾರವನ್ನು ಮುಂದೆ ಬರುವ ಶಿಕ್ಷಕರಿಗೂ ತಾವೆಲ್ಲರೂ ನೀಡಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೈಲಜಾ ಮಾತನಾಡಿ, ಹಳ್ಳಿಯ ಮಕ್ಕಳಿಗೆ ಇಂತಹ ಶಿಕ್ಷಕರು ಸಿಕ್ಕಾಗ ಮಾತ್ರ ಅವರ ಬೆಳವಣಿಗೆ ಸಾಧ್ಯವಾಗುತ್ತದೆ.ಈ ಶಾಲೆಗೆ ಈ ಶಿಕ್ಷಕರು ಬಂದ ಮೇಲೆ ಇಡೀ ಶಾಲೆಯ ವಾತಾವರಣ ಬದಲಾ ಯಿತು.ಇಂದು ಅವರಿಗೆ ಬೀಳ್ಕೊಡುಗೆ ಕೊಡುತ್ತಿರುವುದು ಸಾಕಷ್ಟು ನಮಗೆ ದುಃಖವನ್ನು ಕೊಡುತ್ತಿದೆ ಎಂದರು.