ಕೋಲಾರ –
ಮುಂದಿನ ದಿನಗಳಲ್ಲಿ ದೇಶದಲ್ಲಿ ಒಳ್ಳೆಯ ದಿನಗಳಿಲ್ಲ. ಮುಂಬರುವ ಗ್ರಹಣದ ನಂತರವೂ ಅಪಾಯ ಇದೆ.ಕೋವಿಡ್ ನಿಲ್ಲುವ ಲಕ್ಷಗಳು ಕಡಿಮೆ.ಬರುವ ದಿನಗಳಲ್ಲಿ ರಾಜಕೀಯ ವಿಪ್ಲವ ಆಗುತ್ತದೆ ಆದರೆ ಯಡಿಯೂರಪ್ಪ ಬಿದ್ದು ಹೋಗುತ್ತಾನೆಂದು ಹೇಳಬೇಡಿ.ಹೀಗೆಂದು ಕೋಡಿ ಮಠದ ಶಿವಕುಮಾರ ಶಿವಾನಂದರ ಭವಿಷ್ಯ ನುಡಿದಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು ಮುಂಬರುವ ಗ್ರಹಣದ ನಂತರವೂ ಅಪಾಯ ಇದೆ. ಇದು ಜಾಗತಿಕ ಸಮಸ್ಯೆ ಒಂದು ದೇಶ ಅಥವಾ ರಾಜ್ಯದ್ದಲ್ಲ. ಕೋವಿಡ್ ನಿಲ್ಲುವ ಲಕ್ಷಗಳು ಕಡಿಮೆ ಎಂದರು. ಇನ್ನೂ ಯುಗಾದಿ ನಂತರ ಬದಲಾವಣೆಗಳಾಗುವ ಸಾಧ್ಯತೆ ಇದೆ.ಕೊರೊನಾ ತಡೆಯಲು ಸ್ವಚ್ಚತೆ ಬಹಳ ಮುಖ್ಯ ಬೇವಿನ ಸೊಪ್ಪು ಆಂಟಿಬಯಾಟಿಕ್ ಇದ್ದ ಹಾಗೆ ಕಾರ್ತಿಕದಲ್ಲಿ ದೀಪ ಹಚ್ಚುವುದು ಉತ್ತಮ ಸಂಪ್ರದಾಯವೆಂದರು.
ಇನ್ನೂ ಚಪ್ಪಲಿ ಹಾಕಿಕೊಂಡು ಅಡುಗೆ ಮನೆಯಲ್ಲಿ ಓಡಾಡಬಾರದು.ಒಳ್ಳೆಯ ಸಂಪ್ರದಾಯಗಳನ್ನು ಕೈಬಿಟ್ಟಿರುವುದರಿಂದ ಕಾಯಿಲೆಗಳು ಹಿಂಬಾಲಿಸುತ್ತಿವೆ.ಸ್ವಚ್ಷತೆ ಬಹಳ ಮುಖ್ಯ.ಈ ಒಂದು ಕೊರೊನಾ ಜಗತ್ತಿನ ಏಳುನೂರು ಕೋಟಿ ಜನರನ್ನು ಹೆದರಿಸುತ್ತಿದೆ.ಸಣ್ಣ ವ್ಯಾದಿ ಮನುಷ್ಯನನ್ನು ಹೆದರಿಸಲು ಮನುಷ್ಯ ಅಜ್ಞಾನಿಯಾಗಿರುವುದು ಕಾರಣ. ಇನ್ನೂ ಬರಲಿರುವ ಗ್ರಹಣಗಳಿಂದ ಲೋಕ ಕಂಟಕವಾಗಲಿದೆ.ವಿಪರೀತ ವಾದ ಭೂಕಂಪನಗಳಾಗಲಿವೆ.ಮಳೆ ಭಾರೀ ಪ್ರಮಾಣದಲ್ಲಿ ಆಗಲಿದೆ.ಅಚ್ಚರಿಯ ಸಂಗತಿಗಳು ನಡೆಯಲಿದೆ.ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ.ಈ ರೀತಿ ಹೇಳಿದ್ರೆ ಯಡಿಯೂರಪ್ಪ ಬಿದ್ದು ಹೋಗ್ತಾರೆ ಎಂದು ಮಾದ್ಯಮದವರು ಹೇಳಬೇಡಿ ಎನ್ನುತ್ತಾ ಯಡಿಯೂರಪ್ಪ ಕೂಡ ಇದಕ್ಕೆ ಹೊರತಾಗಿಲ್ಲವೆಂದರು.ಇನ್ನೂ ಇಂದಿನ ದಿನಗಳ ಈ ರಾಜಕೀಯ ವಿಪ್ಲವಕ್ಕೆ ಈ ಗ್ರಹಣಗಳೇ ಕಾರಣ ಭಗವಂತನ ಪ್ರಾರ್ಥನೆಯಿಂದ ಇದಕ್ಕೆಲ್ಲ ಪರಿಹಾರ ಇದೆ.ಯಾರೂ ಕೂಡ ಹೆದರಬೇಕಿಲ್ಲ.ಮುಂದಿನ ದಿನಗಳಲ್ಲಿ ದೇಶದಲ್ಲಿ ಒಳ್ಳೆಯ ದಿನಗಳಲ್ಲಿ ಎಂದರು.