ವಿಜಯಪುರ –
ಮುಂಬಡ್ತಿಯನ್ನು ಪಡೆದ ಶಿಕ್ಷಕಿಯೊಬ್ಬರನ್ನು ಕರ್ತವ್ಯ ಸ್ಥಳದಿಂದ ಬಿಡುಗಡೆ ಮಾಡಿ ಚಾಲನಾ ಆದೇಶ ನೀಡಲು ಕಡತ ಮಂಡಿಸಲು ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದ ವಿಜಯಪುರ ಗ್ರಾಮೀಣ ವಿಭಾಗದ ಬಿಇಒ ಕಚೇರಿಯ ವಿನೋದ ನರಸಿಂಹ ರಾಠೋಡ ರನ್ನು ಎಸಿಬಿ ಅಧಿಕಾರಿಗಳು ಜೈಲಿಗೆ ಕಳಿಸಿದ್ದಾರೆ.ಹೌದು ಲಂಚ ಸ್ವೀಕರಿ ಸುತ್ತಿದ್ದ ಶಿಕ್ಷಣ ಇಲಾಖೆಯ ಎಸ್ಡಿಹಎ ನಿನ್ನೆಯಷ್ಟೇ ಎಸಿಬಿ ಬಲೆಗೆ ಬಿದ್ದಿದ್ದರು ವಶಕ್ಕೆ ತಗೆದುಕೊಂಡು ಸುಧೀರ್ಘವಾಗಿ ವಿಚಾರಣೆ ಮಾಡಿ ನ್ಯಾಯಾಧೀಶರ ಎದುರು ಹಾಜರು ಮಾಡಲಾಗಿತ್ತು ಸಧ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಫ್ಪಿಸಲಾಗಿದೆ.
ಇನ್ನೂ ಇಟ್ಟಂಗಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸರೋಜಿನಿ ಹೂಗಾರ ಎಂಬುವರು ಮುಖ್ಯೋಪಾದ್ಯಾಯ ಹುದ್ದೆಗೆ ಬಡ್ತಿ ಪಡೆದಿದ್ದರು.ಬಡ್ತಿ ಪಡೆದು ಇಟ್ಟಂಗಿಹಾಳ ಕೆ.ಎಚ್.ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.ಇದಕ್ಕಾಗಿ ವಿಜಯ ಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಯ ವಿಷಯ ನಿರ್ವಾಹಕ ವಿನೋದ ನರಸಿಂದ ರಾಠೋಡ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಲಂಚದ ಹಣ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾ ರಿಗಳು ದಾಳಿ ನಡೆಸಿ ಬಂಧಿಸಿದ್ದರು.
ಡಿಎಸ್ಪಿ ಎಂ.ಕೆ.ಗಂಗಲ್ ನೇತೃತ್ವದಲ್ಲಿ ಸಿಪಿಐಗಳಾದ ಪರಮೇಶ್ವರ ಕವಟಗಿ, ಚಂದ್ರ ಕಲಾ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿ ದ್ದರು ಈ ಕುರಿತು ಶಿಕ್ಷಕಿ ಪರವಾಗಿ ವಕೀಲರಾಗಿರುವ ಅವರ ಪತಿ ಈರಗಂಟೆಪ್ಪ ದೂರು ನೀಡಿದ್ದರು ಸಧ್ಯ ರಾಠೋಡ ಅವರನ್ನು ನ್ಯಾಯಾಂಗ ಬಂಧನದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಜೈಲಿಗೆ ಕಳಿಸಿದ್ದಾರೆ.