ಬೆಂಗಳೂರು –
ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದೆ. ಈಗಾಗಲೇ ಈ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಆರೋಪಿ ಸೇರಿದಂತೆ ಹಲವರನ್ನು ಬಂಧಿಸಿದ ಬೆನ್ನಲ್ಲೇ ಈಗ ಮತ್ತೆ ಮೂವರನ್ನು ಬಂಧನ ಮಾಡಲಾಗಿದೆ.

ಸಿ ಎ ಆರ್ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧನ ಮಾಡಲಾಗಿದೆ. ಕೆಪಿಎಸ್ ಸಿ ನಡೆಸುವ ಎಫ್ ಡಿಎ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಮುಸ್ತಾಕ್ ನನ್ನು ಬಂಧನ ಮಾಡಲಾಗಿದೆ.

ಸಿಸಿಬಿ ಪೊಲೀಸರ ತನಿಖೆ ವೇಳೆ ಕೆಪಿಎಸ್ ಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸ್ಟನೋಗ್ರಾಫರ್ ಸನಾ ಬೇಡಿ ಜೊತೆ ಲಿಂಕ್ ಹಿನ್ನಲೆಯಲ್ಲಿ ಕಾನ್ಸ್‌ಟೇಬಲ್ ಮುಸ್ತಾಕ್ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಫ್ ಡಿಎ ಪರೀಕ್ಷೆ ಕೂಡ ಬರೆಯಲು ತಯಾರಿ ನಡೆಸಿದ್ದ ಪಿಸಿ ಮುಸ್ತಾಕ್ ಪರೀಕ್ಷೆ ಬರೆಯಲು ಕವಿತಾ ನಾಯ್ಕ್ ಅವರೊಂದಿಗೆ ಹಾವೇರಿಗೆ ತೆರಳಿದ್ದ.

ಹಾವೇರಿಯಲ್ಲಿ ಭಾನುವಾರ ಪರೀಕ್ಷೆ ಬರೆಯಲು ತೆರಳಿದ್ದ.ಆದರೆ ಪೇಪರ್ ಲೀಕ್ ಆಗಿತ್ತು ಬಳಿಕ ಪೋನ್ ಆಪ್ ಮಾಡಿಕೊಂಡು ಹಾವೇರಿಯಲ್ಲೇ ಉಳಿದುಕೊಂಡಿದ್ದ. ಆರೋಪಿತೆ ಸನಾ ಬೇಡಿ ವಿಚಾರಣೆ ಮಾಡಿದಾಗ ಪ್ರಶ್ನೆ ಪತ್ರಿಕೆಯನ್ನು ಸಿಎಆರ್ ಕಾನ್ಸ್ ಟೇಬಲ್ ಮುಸ್ತಾಕ್ ಗೆ ನೀಡಿದಾಗಿ ಹೇಳಿಕೆ ನೀಡಿದ್ದರು.

ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಹಾವೇರಿಯಲ್ಲಿ ಮುಸ್ತಾಕ್ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ರು.ವಿಚಾರಣೆ ವೇಳೆ ಪ್ರಶ್ನೆ ಪತ್ರಿಕೆ ಪಡೆದಿದ್ದಾಗಿ ತಪ್ಪೋಪ್ಪಿಕೊಂಡಿದ್ದ. ಹೀಗಾಗಿ ಸಿಎಆರ್ ಕಾನ್ಸ್ ಟೇಬಲ್ ಮುಸ್ತಾಕ್ ಬಂಧಿಸಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಈ ಪ್ರಕರಣದಲ್ಲಿ 82 ಲಕ್ಷ ಹಣ ಹಾಗೂ ಕಿಂಗ್ ಪಿನ್ ವಾಣಿಜ್ಯ ಇಲಾಖೆ ಇನ್ಸ್ ಪೆಕ್ಟರ್ ಚಂದ್ರು,ರಾಚಪ್ಪ ಸೇರಿ 18 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ.ಇದರ ಜೊತೆಗೆ ಇಂದು ಮತ್ತೊಬ್ಬ ಆರೋಪಿ ಕೆಪಿಎಸ್ ಸಿ ಅಕೌಂಟೆಂಟ್ ಬಸವರಾಜ್ ಕುಬಾರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಬಿಡುವಿಲ್ಲದೆ ತನಿಖೆಯನ್ನು ಮಾಡತಾ ಇದ್ದಾರೆ.