ಇಟ್ಟಿಗಟ್ಟಿ ರಸ್ತೆ ಅಪಘಾತದ ವರದಿ ಕೋರಿದ ಸುಪ್ರೀಂ ಕೋರ್ಟ್ ವರದಿ ನೀಡಲು ಫೆಬ್ರವರಿ 15 ಗಡುವು

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಮಧ್ಯದ ಹೆದ್ದಾರಿಯಲ್ಲಿ ಮನುಕುಲವನ್ನೇ ಬೆಚ್ಚಿ ಬಿಳಿಸಿದ ರಸ್ತೆ ಅಪಘಾತದ ಕುರಿತು ಸುಪ್ರೀಂ ಕೋರ್ಟ್ ವರದಿಯನ್ನು ಕೇಳಿದೆ.

ಹೌದು..ಕಳೆದ ವಾರವಷ್ಟೇ ಧಾರವಾಡ ಜಿಲ್ಲೆಯ ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸುಮಾರು 13 ಜನರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಮೀಟಿ ಆನ್ ರೋಡ್ ಸೆಪ್ಟಿ ಅಪಘಾತದ ಕುರಿತು ವರದಿಯನ್ನು ಕೇಳಿದೆ.

ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ಸಮಿತಿ ಧಾರವಾಡ ಅಪಘಾತದ ಕುರಿತು ವರದಿ ಕೋರಿದ್ದು,ಫೆಬ್ರವರಿ 15 ರ ವರೆಗೆ ಗಡುವು ನೀಡಿದೆ.ಈ ಕುರಿತು ರಾಜ್ಯದ ಪ್ರಿನ್ಸಿಪಲ್ಸ್ ಸೆಕ್ರೆಟರಿ ಟ್ರಾನ್ಸಪೋರ್ಟ್ ಡಿಪಾರ್ಟ್ ಮೆಂಟ್ ಅವರಿಗೆ ನೋಟಿಸ್ ನೀಡಿದ್ದು 32 ಕಿಲೊಮೀಟರ್ ವ್ಯಾಪ್ತಿಯಲ್ಲಿ ನಡೆದ ಸುಮಾರು ಎರಡು ವರ್ಷಗಳಿಂದ ನಡೆದ ಅಪಘಾತಗಳ ಪ್ರಮಾಣವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈಗ ವರದಿ ನೀಡುವಂತೆ ಕೋರಿದೆ.ಹೀಗಾಗಿ ಹುಬ್ಬಳ್ಳಿ ಧಾರವಾಡ ಎಲ್ಲಾ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಈ ಕುರಿತು ವರದಿಯನ್ನು ಸಿದ್ದಮಾಡುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.