ಯಾದಗಿರಿ –
ಕೊನೆಗೂ ರಾಜ್ಯದಲ್ಲಿ ಶಿಕ್ಷಕರಿಗಾಗಿ ಕೋವಿಡ್ ಕೇರ್ ವನ್ನು ಆರಂಭ ಮಾಡಲಾಗಿದೆ ಹೌದು ನಗರದ ಆರ್‌ಟಿಒ ಕಚೇರಿ ಹಿಂಭಾಗದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿ ಯಿಂದ ಕೋವಿಡ್ ಕೇರ್ ನ್ನು ಆರಂಭಿಸಲಾಗಿದೆ. ಶಿಕ್ಷಕರ ಕೋವಿಡ್ ಆರೈಕೆ ಕೇಂದ್ರಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಆರ್. ಶಂಕರ್ ಚಾಲನೆ ನೀಡಿದರು.

ಹೌದು ಕೋವಿಡ್‌ನಿಂದ ಮೃತಪಟ್ಟ 17 ಶಿಕ್ಷಕರ ಭಾವಚಿತ್ರಗಳಿಗೆ ಮೊದಲು ಮಾಲಾರ್ಪಣೆ ಮಾಡಿ ನಂತರ ಸೂಚನೆ ಮಾಡಲಾಯಿತು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಅವರು ಮೃತ ಶಿಕ್ಷಕರ ನೆನಪಿಗಾಗಿ ಶಾಲಾ ಆವರಣದಲ್ಲಿ ಸಸಿ ನೆಟ್ಟರು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ರಾಗಪ್ರಿಯಾ, ಜಿಪಂ ಸಿಇಒ ಶಿಲ್ಪಾ ಶರ್ಮಾ,ಎಸ್ಪಿ ಸಿ.ಬಿ. ವೇದ ಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಕಾರ್ಯದರ್ಶಿ ಜಗದೀಶ ಗೋಟ್ಲಾ, ಸಹ ಕಾರ್ಯದರ್ಶಿ ಮೂರ್ತಿ ಜಿ.ಮನೋಹರ ಕಟ್ಟಿಮನಿ ಎನ್‌ಜಿಒ ಕಾರ್ಯದರ್ಶಿ ಶರಣಬಸವ ಗಚ್ಚಿನಮನಿ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಇದ್ದರು.