ಬೆಂಗಳೂರು –
ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಇಂದು ನಡೆದ ಸಚಿವ ಸಂಪು ಟ ಸಭೆಯಲ್ಲಿ ರಾಜ್ಯದ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಒಪ್ಪಿಗೆ ನೀಡಲಾಗಿದೆ.

ಹೀಗಾಗಿ ವರ್ಗಾವಣೆ ವಿಚಾರ ಕುರಿತಂತೆ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಣೆಗೆ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿ ದ್ದು ಅನುಮೋದನೆ ಪಡೆದುಕೊಂಡಿದೆ.

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಅಂತಿಮ ಹಂತಕ್ಕೆ ತಲುಪಿದ್ದು ಇಂದು ನಡೆದ ಸಚಿವ ಸಂಪುಟದಿಂದ ಅನುಮೋದನೆಗೊಂ ಡಿದೆ

ಇನ್ನೂ ಒಂದೆರೆಡು ದಿನಗಳಲ್ಲಿ ಸಂಸದೀಯ ವ್ಯವ ಹಾರ ಗಳ ಇಲಾಖೆಯ ಮುಖಾಂತರ ರಾಜ್ಯಪಾಲರ ಬಳಿ ಅನುಮೋದನೆಗಾಗಿ ಕಡತ ಹೋಗಲಿದ್ದು ನಂತ ರ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸ ಲಿದೆ

ಇನ್ನೂ ಈ ಒಂದು ವರ್ಗಾವಣೆಗೆ ಕಾರಣಿಭೂತರಾದ ಮುಖ್ಯಮಂತ್ರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹಾಗೇ ಕರ್ನಾಟಕ ಗ್ರಾಮೀಣ ಶಿಕ್ಷಕರ ಸಂಘ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯದ ಮುಖ್ಯಮಂತ್ರಿಗೆ ಶಿಕ್ಷಣ ಸಚಿವರಿಗೆ ಸಚಿವ ಸಂಪುಟದ ಎಲ್ಲಾ ನಾಯಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ

ಕೂಡಲೇ ಈ ಒಂದು ಸುಗ್ರೀವಾಜ್ಞೆ ಜಾರಿಗೆ ಬಂದು ವರ್ಗಾವಣೆಯ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಅನುಕೂಲವಾಗಲೆಂದು ಶಿಕ್ಷಕರು ಒತ್ತಾಯವನ್ನು ಮಾಡಿದ್ದಾರೆ.