ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೊನೆಗೂ 7 ನೇ ವೇತನ ಆಯೋಗ ಘೋಷಣೆ ಯಾಗಿದ್ದು ಮುಖ್ಯಮಂತ್ರಿ ಇಂದು ಈ ಒಂದು ಆಯೋಗದ ಜವಾಬ್ದಾರಿ ಯನ್ನು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ಅವರಿಗೆ ನೀಡಲಾಗಿದೆ ಹೌದು ಈ ಒಂದು ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ
ಮುಖ್ಯಮಂತ್ರಿಗಳು 7ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸುಧಾಕರ್ ರಾವ್ ರವರನ್ನು ನೇಮಕ ಮಾಡಿ ದಾವಣಗೆರೆಯಲ್ಲಿ ಮಾಧ್ಯಮದ ಮೂಲಕ ಘೋಷಿಸಿದ್ದಾರೆ
ಇನ್ನೂ ಕಳೆದ ಹಲವಾರು ದಿನಗಳಿಂದ ಈ ಒಂದು ವಿಚಾರ ಕುರಿತು ಷಡಾಕ್ಷರಿ ಅವರು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಒತ್ತಾಯ ಮಾಡುತ್ತಿದ್ದರು ಈ ಕುರಿತು ಮುಖ್ಯಮಂತ್ರಿ ಅವರು ಕೂಡಾ ಹೇಳಿದ್ದರು ಇದರೊಂದಿಗೆ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಸುದ್ದಿ ಸಂತೆ ಕೂಡಾ ನಿರಂತರವಾಗಿ ವರದಿಗಳನ್ನು ಪ್ರಸಾರ ಮಾಡಿತ್ತು
ಇಂದು ಬೆಳಿಗ್ಗೆ ಕೂಡಾ ಇಂದೇ ಆಗುತ್ತದೆ ಎಂದು ವರದಿ ಮಾಡಿತ್ತು ಇದೆಲ್ಲದರ ಪರಿಣಾಮವಾಗಿ ಮುಖ್ಯಮಂತ್ರಿ ಅವರು ಈ ಒಂದು ವೇತನ ಆಯೋಗದ ಜವಾಬ್ದಾರಿ ಯನ್ನು ಸುಧಾಕರ್ ಅವರಿಗೆ ನೀಡಿ ಘೋಷಣೆ ಮಾಡಿದ್ದಾರೆ.
ಇನ್ನೂ ಈ ಒಂದು ಹಿನ್ನಲೆಯಲ್ಲಿ ನಾಳೆ ಮುಖ್ಯಮಂತ್ರಿ ಅವರಿಗೆ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳ ಲಾಗಿದೆ
10-11-22 ರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಭಿನಂದನೆಯನ್ನು ಆಯೋಜಿಸಲಾಗಿದೆಕ ಡ್ಡಾಯವಾಗಿ ಎಲ್ಲ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶ ಕರು ಆಗಮಿಸುವಂತೆ ರಾಜ್ಯಾಧ್ಯಕ್ಷರು ವಿನಂತಿಸಿದ್ದಾರೆ
ವರದಿ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.