ಬೆಂಗಳೂರು –
ಕೊನೆಗೂ 7ನೇ ವೇತನ ಆಯೋಗದ ವರದಿಗೆ ಮಹೂರ್ತ ನಿಗದಿ – ನಾಳೆಯೆ ಆಯೋಗದಿಂದ ಸಲ್ಲಿಕೆಯಾಗಲಿದೆ ವರದಿ ಹೌದು
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಚನೆಗೊಂಡಿ ರುವ 7ನೇ ವೇತನ ಆಯೋಗದ ವರದಿ ನಾಳೆ ಅಂದರೆ ಮಾರ್ಚ್ 16 ರಂದು ಸಲ್ಲಿಕೆಯಾಗಲಿದೆ ಈಗಾಗಲೇ ಈ ಒಂದು ಆಯೋಗದ ಅವಧಿ ಯನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು ಹೀಗಾಗಿ ಮಾರ್ಚ್ 15 ರಂದು ಎರಡನೇಯ ಹಂತದ ಅವಧಿ ಮುಕ್ತಾಯವಾಗಿದ್ದು
ಹೀಗಾಗಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಈ ಒಂದು ಆಯೋಗವು ತನ್ನ ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಕೆ ಮಾಡಲಿದೆ.ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಯವರಿಗೆ ಕಾವೇರಿ ನಿವಾಸದಲ್ಲಿ ವರದಿಯನ್ನು ಸಲ್ಲಿಕೆಯಾಗಲಿದೆ.
ಆಯೋಗದ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 7ನೇ ವೇತನ ಆಯೋಗದ ವರದಿ ಯನ್ನು ಸಲ್ಲಿಸಲಿದ್ದಾರೆ.ಈಗಾಗಲೇ ವರದಿಯನ್ನು ಆಯೋಗದ ಅಧ್ಯಕ್ಷರ ನೇತ್ರತ್ವದಲ್ಲಿ ಸಂಪೂರ್ಣ ವಾಗಿ ಸಿದ್ದಗೊಂಡಿದೆ.
ನೀತಿ ಸಂಹಿತೆ ಮುನ್ನವೇ ಸಲ್ಲಿಕೆಯಾಗುತ್ತಿದ್ದು ರಾಜ್ಯ ಸರ್ಕಾರಿ ನೌಕರರ ಸಂತಸಕ್ಕೆ ಇಮ್ಮಡಿ ಗೊಂಡಿದ್ದು ಇನ್ನೂ ಯಾವಾಗ ಜಾರಿಗೆ ಬರಲಿದೆ ಎಂಬೊದಕ್ಕೆ ಮುಖ್ಯಮಂತ್ರಿಯವರೇ ಉತ್ತರಿಸಬೇಕಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..