ಬೆಂಗಳೂರು –
ಕರೋನ ಮಹಾಮಾರಿಯ ನಡುವೆ ಸದಾ ಮೇಲಿಂ ದ ಮೇಲೆ ಸಾವಿನ ಸುದ್ದಿ ಕೇಳುತ್ತಿರುವ ನಾಡಿನ ಶಿಕ್ಷಕರಿಗೆ ಕೊನೆಗೂ ರಾಜ್ಯಪಾಲರು ಸಿಹಿಸುದ್ದಿ ನೀಡಿ ದ್ದಾರೆ.ಕಳೆದ ಹಲವು ದಿನಗಳಿಂದ ವರ್ಗಾವಣೆಯ ನೀರಿಕ್ಷೆಯಲ್ಲಿದ್ದ ನಾಡಿನ ಶಿಕ್ಷಕರ ವರ್ಗಾವಣೆಗೆ ರಾಜ್ಯಪಾಲ ವಜೂಬಾಲಿವಾಲಾ ಅವರು ಅಂಕಿತ ಹಾಕಿದ್ದಾರೆ.

ಹೌದು ವರ್ಗಾವಣೆ ವಿಚಾರ ಕುರಿತಂತೆ ಕಳೆದ ವಾರ ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ಪಡೆದು ನಂತರ ಸುಗ್ರವಾಜ್ಞೆಯನ್ನು ರಾಜ್ಯ ಪಾಲರ ಬಳಿ ಕಳಿಸಿದ್ದ ಕಡತಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ.ಹೌದು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ಆಧ್ಯಾದೇಶ 2021 ಅನ್ನು ರಾಜ್ಯಪಾಲ ರ ಅಂಕಿತಕ್ಕಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದ ಲ್ಲಿ ಮಂಡನೆ ಮಾಡಿ ನಂತರ ಅದನ್ನು ರಾಜ್ಯಪಾಲರ ಬಳಿಗೆ ಕಳುಹಿಸಿ ಕೊಡಲಾಗಿತ್ತು.

ಈ ಒಂದು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದು ಪಡಿ ಕಾಯ್ದೆಗೆ ಇಂದು ರಾಜ್ಯಪಾಲರು ಅಂಕಿತ ನೀಡಿ ಶಿಕ್ಷಕರ ವರ್ಗಾವಣೆಯ ನಿಯಂತ್ರಣ ತಿದ್ದುಪಡಿ ಕಾಯ್ದೆಗೆ ಗ್ರೀನ್ ಸಿಗ್ನಲ್ ನೀಡಿ ರಾಜ್ಯದಲ್ಲಿ ವರ್ಗಾವ ಣೆಯ ನೀರಿಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿಯನ್ನು ನೀಡಿದ್ದಾರೆ.ಈ ಕುರಿತಂತೆ ಇಂದು ವಿಶೇಷ ರಾಜ್ಯ ಪತ್ರಿಕೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆಧ್ಯಾದೇಶ 2021 ಇದಕ್ಕೆ ಎಪ್ರೀಲ್ 29 ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದೆ.ಇನ್ನೂಪ್ರಮುಖವಾಗಿ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ 2019-20ನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಈ ಒಂದು ಸಂದರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕರ ಸಂದರ್ಭ ದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕರ ಸಂಬಂಧದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆಧ್ಯಾದೇಶ 2021ರ ಪ್ರಾರಂಭದ ದಿನಾಂಕದ ನಿಕಟ ತರುವಾಯ ಮಾಡುವ ವರ್ಗಾವಣೆಯಲ್ಲಿ 2019 -20ನೇ ಸಾಲಿನಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ

ಆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿಯ ಪ್ರಯೋಜನವನ್ನು ನೀಡುವುದ ಕ್ಕಾಗಿ ಮುಂಬರುವ ವರ್ಗಾವಣೆಗಳಿಗೆ, ಪೂರ್ವದಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಅವರು ಕಾರ್ಯನಿರ್ವಹಿಸುತ್ತಿ ರುವ ತಾಲೂಕು ಅಥವಾ ಜಿಲ್ಲೆಯೊಳಗೆ ಒಂದು ಸಲದ ಕ್ರಮವಾಗಿ ನಿಯಮಿಸ ಬಹುದಾದಂತಹ ರೀತಿಯಲ್ಲಿ ವರ್ಗಾವಣೆಯ ಸ್ಥಳ ವನ್ನು ಆಯ್ಕೆ ಮಾಡಲು ಅವಕಾಶವನ್ನು ಈ ಒಂದು ಸುಗ್ರಿವಾಜ್ಞೆ ಯಲ್ಲಿ ಉಲ್ಲೇಖ ಮಾಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್ನೂ ಈ ಒಂದು ವಿಚಾರ ಕುರಿತಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸುದ್ದಿ ಸಂತೆ ಯೊಂದಿಗೆ ಮಾತನಾಡಿ ಶಿಕ್ಷಕರ ವರ್ಗಾವಣೆಯ ಸುಗ್ರಿವಾಜ್ಞೆಯ ಕುರಿತಂತೆ ಶೀಘ್ರದಲ್ಲೇ ರಾಜ್ಯ ಕಮೀ ಟಿಯ ವರ್ಚೂವಲ್ ಸಭೆ ಕರೆದು ಮುಂದಿನ ನಡೆ ಯ ಕುರಿತಂತೆ ತಿರ್ಮಾನಿಸಲಾಗುವುದು ಎಂದು ಹೇಳಿದರು.