ಬೆಂಗಳೂರು –
ಅಂತೂ ಇಂತೂ ಬಹಳ ದಿನಗಳಿಂದ ತೀವ್ರವಾಗಿ ಕುತೂಹಲದಿಂದಾಗಿ ನಾಡಿನ ಶಿಕ್ಷಕರು ಕಾಯುತ್ತಿದ್ದ ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ.
ಈ ಹಿಂದೆ ನಡೆದ ಸಭೆಯಲ್ಲಿ ಜೂನ್ 30 ರಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು ಹೇಳಿದಂತೆ ಇಂದು ಬಿಡುಗಡೆ ಮಾಡಿದ್ದು ಇನ್ನೂ ನಾಳೆ ಅಂದರೆ ಜುಲೈ 1ರಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ 2019-20ನೇ ಸಾಲಿನ ಕಡ್ಡಾಯ ವರ್ಗಾವಣೆ ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ತಾಲೂಕಿನ ಹೊರಗೆ ಅಥವಾ ಜಿಲ್ಲೆಯ ಹೊರಗೆ ವರ್ಗಾವಣೆ ಗೊಂಡ ಶಿಕ್ಷಕನ ಸಂಬಂಧದಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಆ ಸಂಬಂಧಪಟ್ಟ ತಾಲೂಕು,ಜಿಲ್ಲೆಯೊಳಗೆ ಸ್ಥಳ ನಿಯುಕ್ತಿ ಪ್ರಯೋಗವನ್ನು ನೀಡುವುದಕ್ಕೆ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು,ಸ್ಥಳ ಆಯ್ಕೆ ಮಾಡಿಕೊ ಳ್ಳಲು ಒಂದು ಸಲದ ಕ್ರಮವಾಗಿ ವಿಶೇಷ ಕೌನ್ಸಿ ಲಿಂಗ್ ಹಮ್ಮಿಕೊಂಡು ಜುಲೈ 12, 2021ರಿಂದ ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ಬುಕುಮಾರ್. 2019-20ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯ ಸಂದರ್ಭದಲ್ಲಿ ಕರ್ನಾ ಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮಗಳು 2017 ರ ಶಿಕ್ಷಕರ ವರ್ಗಾವಣೆ ಕಾಯ್ದೆಯ ಸೆಕ್ಷನ್ 3(ಎ) ಮತ್ತು ಸದರಿ ವರ್ಗಾವಣೆ ನಿಯಮಗಳ ನಿಯಮ 6(3) (i) (ii) (iv)ರ ಅಡಿಯಲ್ಲಿನ ವರ್ಗಾವಣೆ ಪ್ರಕರಣಗಳಲ್ಲಿ ಕೆಲವು ಪ್ರಾಥಮಿಕ ಶಾಲಾ ಶಿಕ್ಷಕರು ತಾಲೂಕಿನಿಂದ ಹೊರಗೆ ಹಾಗೂ ಕೆಲವು ಪ್ರೌಢ ಶಾಲಾ ಶಿಕ್ಷಕರು ಜಿಲ್ಲೆಯಿಂದ ಹೊರಗಡೆ ಸ್ಥಳ ನಿಯುಕ್ತಿಗೊಂಡಿದ್ದು, ಬಾಧಿತರಾಗಿರುತ್ತಾರೆ ಎಂಬ ಉಲ್ಲೇಖ ಮಾಡಿ ಅವಕಾಶವನ್ನು ನೀಡಲಾಗಿದೆ
2019-20ನೇ ಸಾಲಿನಲ್ಲಿನ ವರ್ಗಾವಣೆಗಳಲ್ಲಿ ಮೇಲಿನಂತೆ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢ ಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿ ಸುತ್ತಿದ್ದರೂ,ಆ ಸಂಬಂಧಪಟ್ಟ ತಾಲ್ಲೂಕು ಅಥವಾ ಜಿಲ್ಲೆಯೊಳಗೆ ಸ್ಥಳನಿಯುಕ್ತಿ ಪ್ರಯೋಜನವನ್ನು ನೀಡುವುದಕ್ಕೆ, ಒಂದು ಸಲ ಕ್ರಮವಾಗಿ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು ಅವಕಾಶವನ್ನು ಒದಗಿಸಲಾಗಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ 2021 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮ 2021ರಲ್ಲಿನ ಅವಕಾಶಗಳನ್ವಯ ವಿಶೇಷ ಕೌನ್ಸಿಲಿಂಗ್ ಹಮ್ಮಿಕೊಂಡಿರುವ ಬಗ್ಗೆ ವೇಳಾಪಟ್ಟಿ ಯನ್ನು ಹಾಗೂ ಮಾರ್ಗಸೂಚಿ ಕ್ರಮಗಳನ್ನು ನಿಗದಿಪಡಿಸಿದೆ.ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಶೇಷ ಕೌನ್ಸಿಲಿಂಗ್ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದೆ.