This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಖಾತೆಯಲ್ಲಿನ ಹಣ ನೀಡದ KVG ಬ್ಯಾಂಕ್ ಗೆ ದಂಡ – ಮಂಜುನಾಥನ ಕೂಗಿಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕರ ಆಯೋಗ ಬ್ಯಾಂಕ್ ಗೆ ದಂಡ ವಿಧಿಸಿ ಪರಿಹಾರ ನೀಡುವಂತೆ ಆದೇಶ…..

ಖಾತೆಯಲ್ಲಿನ ಹಣ ನೀಡದ KVG ಬ್ಯಾಂಕ್ ಗೆ ದಂಡ – ಮಂಜುನಾಥನ ಕೂಗಿಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕರ ಆಯೋಗ ಬ್ಯಾಂಕ್ ಗೆ ದಂಡ ವಿಧಿಸಿ ಪರಿಹಾರ ನೀಡುವಂತೆ ಆದೇಶ…..
WhatsApp Group Join Now
Telegram Group Join Now

ಧಾರವಾಡ

ಖಾತೆಯಲ್ಲಿನ ಹಣ ನೀಡದ KVG ಬ್ಯಾಂಕ್ ಗೆ ದಂಡ – ಮಂಜುನಾಥನ ಕೂಗಿಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕರ ಆಯೋಗ ಬ್ಯಾಂಕ್ ಗೆ ದಂಡ ವಿಧಿಸಿ ಪರಿಹಾರ ನೀಡುವಂತೆ ಆದೇಶ ಹೌದು ಗ್ರಾಹಕನ ಉಳಿತಾಯ ಖಾತೆಯಲ್ಲಿರುವ ಹಣ ನೀಡದ ಕೆವಿಜಿ ಬ್ಯಾಂಕ್ ಗೆ ಜಿಲ್ಲಾ ಗ್ರಾಹಕರ ಆಯೋಗವು ಬ್ಯಾಂಕ್ ಗೆ ದಂಡ ವಿಧಿಸಿ ಪರಹಾರ ನೀಡುವಂತೆ ಆದೇಶ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಹುಬ್ಬಳ್ಳಿಯ ಮಂಜುನಾಥ ಕೊಪ್ಪದ ಎಂಬುವ ವರು ಕಲಘಟಗಿಯ ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ದಿ:22/04/2006 ರವರೆಗೆ ದೂರುದಾರ ಸದರಿ ಬ್ಯಾಂಕಿನ ಜೊತೆ ವ್ಯವಹಾರ ಮಾಡಿದ್ದು ಅವರ ಖಾತೆಯಲ್ಲಿ ರೂ.32,366/- ಜಮಾ ಇತ್ತು. ದೂರುದಾರರಿಗೆ ಪಾಶ್ರ್ವವಾಯು ತಗಲಿ ಸುಮಾರು 2 ವರ್ಷದವರೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕಾರಣ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಉಪಯೋಗಿಸಿದ್ದಿಲ್ಲ. ಈ ಮಧ್ಯದಲ್ಲಿ ಸರ್ಕಾರದ ಆದೇಶದಂತೆ ಮಲಪ್ರಭಾ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ವಿಲೀನವಾಯಿತು.ದೂರುದಾರನ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರು ಎದುರುದಾ ರರ ಕೆ.ವಿ.ಜಿ. ಬ್ಯಾಂಕಿಗೆ ಸಾಕಷ್ಟು ಸಲ ಭೇಟಿ ಕೊಟ್ಟು ತನ್ನ ಖಾತೆಯ ವಿವರವನ್ನು ಕೇಳಿದ್ದರು.

ಲಿಖಿತ ಅರ್ಜಿ ಕೊಟ್ಟು ಬ್ಯಾಂಕಿನಿಂದ ತನ್ನ ಖಾತಾ ಮಾಹಿತಿ ಕೇಳಿದ್ದರು.ಆದರೆ ಎದುರುದಾರರು ತನ್ನ ಉಳಿತಾಯ ಖಾತೆಯ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಮತ್ತು ತನ್ನ ಉಳಿತಾಯ ಖಾತೆಯಲ್ಲಿ ರುವ ರೂ.32,366/- ತನಗೆ ವಾಪಸ್ಸುಕೊಡುತ್ತಿಲ್ಲ ಅಂತಾ ಹೇಳಿ ಕೆ.ವಿ.ಜಿ. ಬ್ಯಾಂಕಿನ ಅಂತಹ ನಡಾ ವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಬ್ಯಾಂಕಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:10/01/2023 ರಂದು ದೂರು ಸಲ್ಲಿಸಿದ್ದರು.

ದೂರುದಾರ ತನ್ನ ಉಳಿತಾಯ ಖಾತೆಯ ಪಾಸ್ಬುಕ್ ಹಾಗೂ ಎದುರುದಾರ ಬ್ಯಾಂಕಿಗೆ ಕೊಟ್ಟ ಅರ್ಜಿ ನಕಲನ್ನುಆಯೋಗದ ಮುಂದೆ ಹಾಜರುಪಡಿಸಿದ್ದರು. ಕೆಲವು ಖಾತೆದಾರರು ಪಾಸ್ಪುಸ್ತಕ ತರದೇ ಬ್ಯಾಂಕ್ ಮ್ಯಾನೇಜರನಿಂದ ಹಣ ತೆಗೆದುಕೊಂಡು ಹೋಗಿರುತ್ತಾರೆ.ಅದೇ ರೀತಿ ದೂರುದಾರ ತನ್ನ ಖಾತೆಯಲ್ಲಿರುವ ಹಣ ತೆಗೆದುಕೊಂಡು ಹೋಗಿರಬಹುದು.

ಮಲಪ್ರಭಾ ಗ್ರಾಮೀಣ ಬ್ಯಾಂಕಿನ ದೂರುದಾರರ ಉಳಿತಾಯ ಖಾತೆಯ ದಾಖಲೆಗಳು ತಮ್ಮಲ್ಲಿ ಇಲ್ಲದ ಕಾರಣ ತಮ್ಮಿಂದ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ ಕೆ.ವಿ.ಜಿ. ಬ್ಯಾಂಕಿನವರು ಆಕ್ಷೇಪಣೆ ಎತ್ತಿದ್ದರು.ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳ ಶೆಟ್ಟಿ ಹಾಗೂ ಪ್ರಭು.ಚ ಹಿರೇಮಠ ಅವರು ದೂರುದಾರರ ಉಳಿತಾಯ ಖಾತೆಯ ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಇದ್ದು ಆ ಬ್ಯಾಂಕ್ ಕೆ.ವಿ.ಜಿ. ಬ್ಯಾಂಕಿನಲ್ಲಿ ವಿಲೀನ ವಾಗಿರು ವುದರಿಂದ ರಿಸರ್ವ್ ಬ್ಯಾಂಕ್ ನಿಯಮಾವಳಿ ಯಂತೆ ಹಳೆಯ ಬ್ಯಾಂಕಿನ ಎಲ್ಲಾ ಉಳಿತಾಯ ಖಾತೆಗಳ ದಾಖಲೆಗಳನ್ನು ಕನಿಷ್ಟ 10 ವರ್ಷ ಕಾಯ್ದಿಡಬೇಕಾದುದು ಕೆ.ವಿ.ಜಿ. ಬ್ಯಾಂಕಿನವರ ಕರ್ತವ್ಯ ಆಗಿರುತ್ತದೆ.

ಉಳಿತಾಯ ಖಾತೆದಾರ ತನ್ನ ಹಣ ಕೇಳದಿದ್ದರೂ ಅಂತಹ ಹಣವನ್ನು ಕ್ರೂಡಿಕರಿಸಿ ರಿಸರ್ವ ಬ್ಯಾಂಕಿಗೆ ಕಳುಹಿಸಬೇಕು.ನಂತರ ಯಾವಾಗ ಖಾತೆದಾರರು ಬ್ಯಾಂಕಿಗೆ ಬಂದು ತಮ್ಮ ಉಳಿ ತಾಯ ಖಾತೆ ಹಣ ಕೇಳುತ್ತಾರೋ ಆಗ ಸದರಿ ಬ್ಯಾಂಕಿನವರು ರಿಸರ್ವ್ ಬ್ಯಾಂಕಿನಿಂದ ಆ ಹಣ ವನ್ನು ತರಿಸಿ ಬಡ್ಡಿ ಸಮೇತ ಖಾತೆದಾರನಿಗೆ ಕೊಡಬೇಕು ಅನ್ನುವ ನಿಯಮ ಇದೆ.

ಆದರೆ ದೂರುದಾರರ ಉಳಿತಾಯ ಖಾತೆಯ ದಾಖಲೆ ಅಥವಾ ಮಾಹಿತಿ ಕೊಡಲು ಎದುರು ದಾರ ಕೆ.ವಿ.ಜಿ. ಬ್ಯಾಂಕಿನವರು ವಿಫರಾಗಿರುವು ದರಿಂದ ಗ್ರಾಹಕನಾದ ದೂರುದಾರನಿಗೆ ಅವರು ತಮ್ಮ ಮೇಲೆ ಹೇಳಿದ ಎಲ್ಲಾ ನಿಯಮಗಳನ್ನು ಉಲ್ಲಂ ಘಿಸಿ ಕೆ.ವಿ.ಜಿ. ಬ್ಯಾಂಕಿನವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿ ಪ್ರಾಯಪಟ್ಟು ತೀರ್ಪು ನೀಡಿದೆ.

ಅನಾರೋಗ್ಯದಿಂದ ಬಳಲುತ್ತಿರುವ ದೂರುದಾ ರರ ಉಳಿತಾಯ ಖಾತೆಯ ಹಣ ಅವನಿಗೆ ಕೊಡದೇ ಸತಾಯಿಸಿರುವುದು ಕೆ.ವಿ.ಜಿ. ಬ್ಯಾಂಕಿ ನವರ ತಪ್ಪು ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಕೆ.ವಿ.ಜಿ. ಬ್ಯಾಂಕಿನವರಿಂದ ದೂರುದಾ ರನಿಗೆ ತುಂಬಾ ತೊಂದರೆ ಮತ್ತು ಅನಾನುಕೂ  ಲವಾಗಿರುವುದನ್ನು ಪರಿಗಣಿಸಿ ಅವರ ಪಾಸ್ ಪುಸ್ತಕದಲ್ಲಿ ಕಾಣಿಸಿದ ರೂ.32,366/- ಮತ್ತು ಅದರ ಮೇಲೆ ದಿ:22/04/2006 ರಿಂದ ಶೇ.10 ರಂತೆ 17 ವರ್ಷ 6 ತಿಂಗಳಿನ ಬಡ್ಡಿರೂ.56,640/-

ಲೆಕ್ಕ ಹಾಕಿ ಒಟ್ಟು ರೂ.89,006/- ದೂರುದಾ ರರಿಗೆ ಕೊಡುವಂತೆ ಆಯೋಗ ಆದೇಶಿಸಿದೆ ನಂತರ ಹಣ ಸಂದಾಯವಾಗುವವರೆಗೆ ಆ ಹಣದ ಮೇಲೆ ಬಡ್ಡಿ ನೀಡುವಂತೆ ಬ್ಯಾಂಕಿಗೆ ಆಯೋಗ ನಿರ್ದೇಶಿಸಿದೆ.ಅಂಗವಿಕಲರಾದ ದೂರುದಾರನಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಕೆ.ವಿ.ಜಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk