ಹುಬ್ಬಳ್ಳಿ –
ಎಲ್ಲೆಂದರಲ್ಲಿ ಕಸ ಚೆಲ್ಲಿದ್ದಕ್ಕೆ 5700/-ರೂ ಗಳ ದಂಡವನ್ನು ವಿಧಿಸಿದ ಘಟನೆ ಧಾರವಾಡ ದಲ್ಲಿ ನಡೆದಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿ 2ರ ವಾರ್ಡ್ ನಂಬರ್ 6 ಮತ್ತು 14ರ ಪ್ರದೇಶದಲ್ಲಿ ಹಾಗೂ ವಲಯ ಕಚೇರಿ ಯಲ್ಲಿ ಈ ಒಂದು ಘಟನೆ ನಡೆದಿದೆ.
ಈ ಒಂದು ವ್ಯಾಪ್ತಿಯಲ್ಲಿ. ಎಲ್ಲೆಂದರಲ್ಲಿ ಕಸಗಳನ್ನು ಚೆಲ್ಲಿರುವುದನ್ನು ಪರಿಶೀಲಿಸಿದ ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ್ ಹಾಗೂ ಫಕೀರೇಶ ಬೂದಿಹಾಳ ಹಾಗೂ ವಲಯ ಕಚೇರಿ 3 ಹಿರಿಯ ಆರೋಗ್ಯ ನಿರೀಕ್ಷಕರಾದ ಮಧುಕೇಶ್ವರ ರಾಯ್ಕರ್ ಇವರು ಕಸದಲ್ಲಿರುವ ಚೀಟಿಯನ್ನು.ಪರಿಶೀಲಿಸಿ
ಈ ಕಸವನ್ನು ಅನಧಿಕೃತವಾಗಿ ಯಾರು ರಸ್ತೆಯ ಪಕ್ಕದಲ್ಲಿ ಚೆಲ್ಲಿದ್ದಾರೆ ಎನ್ನುವ ಕುರಿತು ಪರಿಶೀಲಿಸಿ ಕಸವನ್ನು ಚೆಲ್ಲಿದವರ ಮನೆಗೆ ಹಾಗೂ ಫೇಮಸ್ ಬೇಕರಿಗೆ ತೆರಳಿ ಖಾತ್ರಿಪಡಿಸಿಕೊಂಡು 5700 /- ರೂ ದಂಡ ವಿಧಿಸಿ ಇನ್ನು ಮುಂದೆ ಈ ರೀತಿ ಅನಧಿಕೃತವಾಗಿ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದಂತೆ ಎಚ್ಚರಿಕೆ ನೀಡಿದರು
ಹಾಗೂ ಅಕ್ಕಪಕ್ಕದ ನೆರೆದಂತಹ ಎಲ್ಲಾ ಸಾರ್ವಜನಿಕರಿಗೆ ಅನಧಿಕೃತವಾಗಿ ಎಲ್ಲೂ ಕಸವನ್ನು ಚೆಲ್ಲದಂತೆ ಮನವರಿಕೆ ಮಾಡಿದ್ದಲ್ಲದೆ ಪಾಲಿಕೆಯಿಂದ ಬರುವಂತಹ ಕಸದ ಗಾಡಿಗೆ ಕಸವನ್ನು ಹಸಿ ಕಸ ಹಾಗೂ ಒಣಕಸವನ್ನಾಗಿ ಬೇರ್ಪಡಿಸಿ ನೀಡುವಂತೆ ತಿಳಿಸಿದರು.
ಆರೋಗ್ಯ ನಿರೀಕ್ಷಕರ ಈ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾದ ಡಾ. ಈಶ್ವರ್ ಉಳ್ಳಾಗಡ್ಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮನೆ ಮನೆಗೆ ಬರುವ ವಾಹನಕ್ಕೆ ಕಸ ನೀಡಿ ಅವಳಿ ನಗರದ ಸ್ವಚ್ಚತಾ ಕಾರ್ಯಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..