SSLC ಪರೀಕ್ಷೆ ಯಲ್ಲಿ ಬೆರಳಣಿಕೆ ಮಾರ್ಕ್ಸ್ ಇಂದು IAS ಅಧಿಕಾರಿ ಮನಸ್ಸು ಮಾಡಿದರೆ ಸಾಧನೆ ಮುಂದೆ ಪ್ರೇರಣೆಯಾಗಿದ್ದಾರೆ ಅಧಿಕಾರಿ ಅವನೀಶ್ ಶರಣ್ ಮಾರ್ಕ್ಸ್ ಕಾರ್ಡ್ ವೈರಲ್…..

Suddi Sante Desk

ನವದೆಹಲಿ

ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿಯನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.ಹೌದು ಈ ಪೋಸ್ಟ್ ಈಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಅವರು ಹಂಚಿಕೊಂಡಿರುವ ಪೋಸ್ಟ್ ನಲ್ಲಿ 1996 ರಲ್ಲಿ ಬಿಹಾರ ಬೋರ್ಡ್‌ನಿಂದ ತಮ್ಮ 10 ನೇ ತರಗತಿಯಲ್ಲಿ ಉತ್ತೀರ್ಣ ರಾಗಿರುವುದನ್ನು ಅದು ತೋರಿಸುತ್ತದೆ.ಇದರಲ್ಲಿ ಅವರು ಗರಿಷ್ಠ 700 ಅಂಕಗಳಿಗೆ 314 ಅಂಕಗಳನ್ನು ಗಳಿಸಿದ್ದಾರೆ ಅದರ ಶೇಕಡವಾರು ಪ್ರಮಾಣ ಕೇವಲ 44.85 ಮಾತ್ರ.

ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಅನೇಕ ಬಳಕೆದಾರರು ಈ ಪೋಸ್ಟ್‌ನಿಂದ ಸ್ಫೂರ್ತಿ ಪಡೆದಿದ್ದಾರೆ ಜೊತೆಗೆ ಕಡಿಮೆ ಅಂಕಗಳನ್ನು ಹೊಂದಿದ್ದರೂ ಸಹ ಯುಪಿಎಸ್ಸಿಯಂತಹ ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎನ್ನುವು ದಕ್ಕೆ ಈ ಅಧಿಕಾರಿಯೇ ನಿದರ್ಶನ ಎಂದೆಲ್ಲಾ ಬರೆದುಕೊಂ ಡಿದ್ದಾರೆ.ಈ ಪೋಸ್ಟ್ ನೋಡಿ ಸ್ಫೂರ್ತಿಗೊಂಡಿರುವ ಯುವಕನೊಬ್ಬನಾನು ಖಿನ್ನತೆಗೆ ಒಳಗಾದಾಗ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ನೀವೇ ಯುವಕರಿಗೆ ಪ್ರೇರಣೆ ಸರ್ ನಿಮ್ಮಂತಹ ಜನರ ಬಗ್ಗೆ ನಾನು ಓದುತ್ತೇನೆ ಅದು ನನಗೆ ಜೀವನದಲ್ಲಿ ಹೋರಾಡಲು ಶಕ್ತಿಯನ್ನು ನೀಡುತ್ತದೆ ಎಂದು ಶ್ಲಾಘಿಸಿದ್ದಾರೆ.

ಇನ್ನೊಬ್ಬ ಇದಕ್ಕೆ ಪ್ರತಿಕ್ರಿಯಿಸುತ್ತಾ ನಾನು 1996 ರಲ್ಲಿ ಅದೇ ಪರೀಕ್ಷೆಯಲ್ಲಿ 65% ಗಳಿಸಿದ್ದೇನೆ ಮತ್ತು ನನ್ನ ಶಾಲೆಯ ಟಾಪರ್ 75% ಕ್ಕಿಂತ ಹೆಚ್ಚು ಪಡೆದಿದ್ದರಿಂದ ಆ ಸಮಯದಲ್ಲಿ ತುಂಬಾ ದುಃಖವಾಯಿತು.ಆದರೆ ಇವತ್ತು ನನಗೆ ಅನಿಸುತ್ತಿದೆ ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಟಾಪರ್ ಆದ ವ್ಯಕ್ತಿ ಮತ್ತು ನನಗೆ ಯಶಸ್ಸಿನ ವಿಷಯದಲ್ಲಿ ಹೆಚ್ಚಿನ ಅಂತರವಿಲ್ಲ ಮತ್ತು ಕಡಿಮೆ ಪಡೆದ ವ್ಯಕ್ತಿ ನಮಗಿಂತ ಹೆಚ್ಚು ಯಶಸ್ವಿಯಾಗುತ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಟ್ವೀಟ್‌ನಲ್ಲಿ ಅವರು ಯುಪಿಎಸ್ಸಿ ಪರೀಕ್ಷೆಗಾಗಿ ಅಧ್ಯಯನ ಮಾಡು ವಾಗಿನ ತಮ್ಮ ನೆಚ್ಚಿನ ಪುಸ್ತಕದ ಫೋಟೋವನ್ನು ಹಂಚಿ ಕೊಂಡಿದ್ದಾರೆ ಇದು ಪುಸ್ತಕದ ಎರಡು ಪುಟಗಳಲ್ಲಿ ಅಂಡರ್‌ಲೈನ್‌ಗಳು ಮತ್ತು ಪೆನ್‌ ನಿಂದ ಚಿತ್ರಿಸಿದ ಮಾರ್ಕ್ ಗಳನ್ನು ತೋರಿಸಿತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.