ಬಾಗಲಕೋಟೆ –
ಶಾರ್ಟ್ ಸರ್ಕ್ಯೂಟ್ ನಿಂದ ಶಾಪಿಂಗ್ ಸೆಂಟರ್ ಹೊತ್ತಿ ಉರಿದ ಪ್ರಕರಣ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ನಗರದ ಬಸವೇಶ್ವರ ವೃತ್ತದ ಬಳಿ ಇರುವ ಸಜ್ಜನ್ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ.

ಮೋರ್ ಸೂಪರ್ ಮಾರ್ಕೆಟ್, ಹಾರ್ಡ್‌ವೇರ್ ಅಂಗಡಿ, ಕೇಕ್ ಬೇಕರಿ, ಸರೋದ್ ಇಳಕಲ್ ಸೀರೆ ಅಂಗಡಿ , ಪೀಟರ್ ಇಂಗ್ಲೆಂಡ್ ಬಟ್ಟೆ ಮಳಿಗೆ ಸೇರಿದಂತೆ ಅನೇಕ ಅಂಗಡಿಗಳು ಶಾಪಿಂಗ್ ಮಾಲ್ ನಲ್ಲಿ ಇದ್ದಿದ್ದು ಎಲ್ಲವೂ ಬೆಂಕಿಗೆ ಆಹುತಿಯಾಗಿವೆ.

ಹಾರ್ಡವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದ್ದು ಇಡೀ ಕಾಂಪ್ಲೆಕ್ಸ್ ನಲ್ಲಿ ಆವರಿಸಿಕೊಂಡು ಧಗ ಧಗನೇ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಯಿತು.

ಇನ್ನು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿಕೊಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿತು. ಇತ್ತ, ನಿಯಂತ್ರಣಕ್ಕೆ ಸಿಗದೆ ಉರಿಯುತ್ತಿರುವ ಬೆಂಕಿಯ ಪರಿ ನೋಡಿ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳ ಮಾಲೀಕರು ಪರದಾಡಿದ ಚಿತ್ರಣ ಸ್ಥಳದಲ್ಲಿ ಕಂಡು ಬಂದಿತು.