ಹುಬ್ಬಳ್ಳಿ –
ಪಟಾಕಿ ನೋಡುತ್ತ ನಿಂತ ಮೂವರ ಕಣ್ಣಿಗೆ ಪಟಾಕಿಯ ಕಿಡಿ ಸಿಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ತಬೀಬ್‌ಲ್ಯಾಂಡ್ ನಲ್ಲಿ ಈ ಒಂದು ಅವಘಡ ನಡೆದಿದೆ. ವ್ಯಕ್ತಿಯೊಬ್ಬರು ಪಟಾಕಿ ಸಿಡಿಯುವುದನ್ನು ನೋಡುತ್ತ ನಿಂತಾಗ ಹಾರಿದ ಕಿಡಿ ನೇರವಾಗಿ ಬಲಗಣ್ಣಿಗೆ ಬಿದ್ದಿದೆ.
ಪಟಾಕಿ ಕಿಡಿ ಸಿಡಿದು ಕಣ್ಣಿನಲ್ಲಿ ಬೀಳುತ್ತಿದ್ದಂತೆ ಕಣ್ಣಿನಿಂದ ರಕ್ತ ಬರಲು ಆರಂಭವಾಗಿದೆ.ತೀವ್ರ ಊರಿ ಮತ್ತು ರಕ್ತ ಬರುತ್ತಿದ್ದಂತೆ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡ್ರು. ಇನ್ನೂ ಇತ್ತ ನಗರದ ಎಸ್.ಎಂ. ಕೃಷ್ಣ ನಗರದಲ್ಲೂ ಕೂಡಾ ಪಟಾಕಿಯಿಂದ ಮತ್ತೊಂದು ಅವಘಡ ಸಂಭವಿಸಿದೆ. 31 ವರ್ಷದ ವ್ಯಕ್ತಿಯ ಎಡಗಣ್ಣಿಗೂ ಪಟಾಕಿಯಿಂದ ಪೆಟ್ಟು ಬಿದ್ದಿದೆ. ಮತ್ತೊಂದೆಡೆ ಇತ್ತ ಮನೋಜಪಾರ್ಕ್‌ನ ಮೂರು ವರ್ಷದ ಬಾಲಕನಿಗೂ ಪಟಾಕಿ ಸಿಡಿದಿದೆ.
ಪಟಾಕಿಯೊಂದಿಗೆ ಬಂದ ಕಲ್ಲಿನ ಪುಡಿ ಕಣ್ಣಿಗೆ ಬಡಿದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮೂವರು ಹುಬ್ಬಳ್ಳಿಯ ಹೊಸೂರ ನಲ್ಲಿರುವ ಜೋಶಿ ಕಣ್ಣೀನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಬೆಳಕಿನ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಿದ್ದ ಹಲವು ಕಡೆಗಳಲ್ಲಿ ಪಟಾಕಿಯ ಅವಘಡಗಳು ಸಂಭವಿಸಿದ್ದು ಪಟಾಕಿ ನಿಷೇಧದ ನಡುವೆಯೂ ಕೂಡಾ ಅಲ್ಲಲ್ಲಿ ಇನ್ನೂ ಪಟಾಕಿ ಹಾರಿಸುತ್ತಿದ್ದು ದಯಮಾಡಿ ಮಕ್ಕಳ ಕೈಯಲ್ಲಿ ಪಟಾಕಿ ಕೊಡುವ ಮುನ್ನ ಪಟಾಕಿಯಿಂದ ಎಚ್ಚರವಾಗಿರಿ ಇದು ನಿಮ್ಮ ಸುದ್ದಿ ಸಂತೆ ವೇಬ್ ನ್ಯೂಸ್ ಕಳಕಳಿ ಕಾಳಜಿ.