ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿಂದು ಮತ್ತೆ ಐದು ಜನ ಶಿಕ್ಷಕರು ಮೃತರಾಗಿದ್ದಾರೆ. ಕೋವಿಡ್ ಕರ್ತವ್ಯ ಮುಗಿಸಿ ಮತ್ತೆ ಕೋವಿಡ್ ಕರ್ತವ್ಯದಲ್ಲಿ ರುವ ಶಿಕ್ಷಕರು ಶಿಕ್ಷಕಿಯರು ಮೃತರಾಗುತ್ತಿದ್ದಾರೆ. ಸೋಂಕು ಕಾಣಿಸಿಕೊಂಡು ಅನಾರೋಗ್ಯದ ಹಿನ್ನ ಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ಚಿಕಿತ್ಸೆ ಫಲಿಸದೇ ಶಿಕ್ಷಕರು ಮೃತರಾಗುತ್ತಿದ್ದು ಇನ್ನೂ ಇಂದು ರಾಜ್ಯದಲ್ಲಿ ಮೃತರಾದ ಶಿಕ್ಷಕರ ಕುರಿತಂತೆ ಮಾಹಿತಿ ನೋಡೊದಾದರೆ

ಜ.ರಾಜೇಸಾಬ.ನ.ನದಾಫ.(ನಲವಡಿ). ಸಾ.ಕುರ್ತ ಕೋಟಿ.ಇವರು ಕೋವಿಡ್ ಗೆ ಬಲಿಯಾಗಿದ್ದಾರೆ. ಸರಕಾರಿ.ಪ್ರೌಢ ಶಾಲೆ ಮಾಡೊಳ್ಳಿಯಲ್ಲಿ ಶಿಕ್ಷಕರಾ ಗಿದ್ದ ಇವರು ಮಹಾಮಾರಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ಮೃತರಾಗಿದ್ದು ಲಕ್ಷ್ಮೇಶ್ವರದ ಸಮಸ್ತ ಶಿಕ್ಷಕರು ಮೃತರಾದ ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ಶ್ರೀಮತಿ ರುಕ್ಮೀಣಿ ಕಂಬಾರ ಚಡಚಣದ ಕಿರಿಯ ಪ್ರಾಥಮಿಕ ಶಾಲೆ ಬರಡೋಲ ಇವರು ಕೂಡಾ ಇಂದು ನಿಧನರಾಗಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರಗೆ ದಾಖಲಾಗಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ಮೃತರಾಗಿದ್ದು ಇವರಿಗೆ ಜಿಲ್ಲೆಯ ಮತ್ತು ತಾಲ್ಲೂಕಿನ ಸಮಸ್ತ ಶಿಕ್ಷಕ ಬಳಗದವರು ಭಾವಪೂರ್ಣ ನಮನವನ್ನು ಸಲ್ಲಿಸಿದರು.

ತಿರುಮಾಲಾಚಾರ್ಯ ರಾಯಚೂರಿನ ಯಾಪಲದಿ ನ್ನಿಯ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿದ್ದ ಇವರು ಕೂಡಾ ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಂಕು ಕಾಣಿಸಿಕೊಂಡು ರಾಯಚೂರಿನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಇವರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಅಗಲಿದ ಹಿರಿಯ ಶಿಕ್ಷಕರಿಗೆ ಜಿಲ್ಲೆಯ ಶಿಕ್ಷಕರು ಭಾವಪೂರ್ಣ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದರು.

ಶ್ರೀಮತಿ R A ದೊಡಮನಿ ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಯನಗರ ಇವರು ಇಂದು ಬೆಳಗಿನ ಜಾವ ಅನಾರೋಗ್ಯದ ನಿಮಿತ್ತ ನಿಧನರಾಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಷೇತ್ರದಲ್ಲಿನ ಶಿಕ್ಷಕರು ಆಪ್ತರು ಬಂಧು ಬಳದವರು ಪ್ರಾರ್ಥನೆ ಸಲ್ಲಿಸಿದರು ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ಹೀಗೆ ನಾಡಿನಾದ್ಯಂತ ಇಂದು ಮೃತರಾದ ಈ ಗುರು ವರ್ಯರಿಗೆ ನಾಡಿನ ಶಿಕ್ಷಕರು ಸಂತಾಪವನ್ನು ಸೂಚಿ ಸಿದ್ದಾರೆ. ಅಗಲಿದ ಶಿಕ್ಷಕ ಶಿಕ್ಷಕಿಯರನ್ನು ನೆನೆದು ನಮನವನ್ನು ಸಲ್ಲಿಸಿದರು. ಇದರೊಂದಿಗೆ ಗ್ರಾಮೀಣ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖ ರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವ ರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾ ರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮ ಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮ ಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಅಗಲಿದ ಆದರ್ಶ ಶಿಕ್ಷಕರಿಗೆ ನಮನ ಸಲ್ಲಿಸಿದ್ದಾರೆ.